ಸರ್ಜಿಕಲ್ ಸ್ಟ್ರೈಕ್ ಗೆ ರಾಹುಲ್ ಗಾಂಧಿಯನ್ನೂ ಕರೆದೊಯ್ಯಬೇಕಿತ್ತೇ? ಹೀಗೆಂದು ಪ್ರಶ್ನಿಸಿದವರು ಯಾರು ಗೊತ್ತಾ?!

ಮಂಗಳವಾರ, 17 ಜುಲೈ 2018 (09:41 IST)
ನವದೆಹಲಿ: ಪದೇ ಪದೇ ಭಾರತೀಯ ಸೇನೆಯ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಅನುಮಾನ ವ್ಯಕ್ತಪಡಿಸುವ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿರುವ ಗೋವಾ ಸಿಎಂ, ಮಾಜಿ ರಕ್ಷಣಾ ಮಂತ್ರಿ ಮನೋಹರ್ ಪರಿಕ್ಕರ್ ಸಾಕ್ಷಿಗೆ ರಾಹುಲ್ ಗಾಂಧಿಯನ್ನೂ ಕರೆದೊಯ್ಯಬೇಕಿತ್ತೇ ಎಂದು ಪ್ರಶ್ನಿಸಿದ್ದಾರೆ.

‘ನಾನು ಸರ್ಜಿಕಲ್ ಸ್ಟ್ರೈಕ್ ಬಗ್ಗೆ ರಾಜಕೀಯ ಮಾತನಾಡುತ್ತಿಲ್ಲ. ಆದರೆ ವಿಪಕ್ಷ ಕಾಂಗ್ರೆಸ್ ಯಾಕೆ ಋಣಾತ್ಮಕ ಸುದ್ದಿ ಬಿತ್ತರಿಸುತ್ತದೆ? ಅವರಿಗೆ ಏನು ಬೇಕಾಗಿದೆ? ಅವರನ್ನೂ ಜತೆಗೇ ಕರೆಯಬೇಕಿತ್ತೇ? ಭಾರತೀಯ ಸೇನೆ ಸರ್ಜಿಕಲ್ ಸ್ಟ್ರೈಕ್ ಸಂದರ್ಭ ರಾಹುಲ್ ಗಾಂಧಿಯನ್ನೂ ಸಾಕ್ಷ್ಯ ತೋರಿಸಲು ಕರೆದೊಯ್ಯಬೇಕಿತ್ತೇ?’ ಎಂದು ಪರಿಕ್ಕರ್ ಪ್ರಶ್ನಿಸಿದ್ದಾರೆ.

ಅನಾರೋಗ್ಯದಿಂದ ಗುಣಮುಖರಾದ ಬಳಿಕ ಇದೇ ಮೊದಲ ಬಾರಿಗೆ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ಮನೋಹರ್ ಪರಿಕ್ಕರ್ ಕಾಂಗ್ರೆಸ್ ವಿರುದ್ಧ ಈ ರೀತಿ ವಾಗ್ದಾಳಿ ನಡೆಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ