ಒಂದು ದಿನ ಮೊದಲೇ ದೆಹಲಿಗೆ ಸಿಎಂ ಕುಮಾರಸ್ವಾಮಿ ಹೋಗಿದ್ದು ಯಾಕೆ ಗೊತ್ತಾ?!
ಆಷಾಢ ಮುಗಿದ ಬಳಿಕ ರಾಜ್ಯ ಸಮ್ಮಿಶ್ರ ಸರ್ಕಾರದ ಸಂಪುಟ ವಿಸ್ತರಣೆ ಮಾಡಬೇಕಿದೆ. ಹೀಗಾಗಿ ಯಾರಿಗೆ ಸಚಿವ ಸ್ಥಾನ ನೀಡಬೇಕು ಎಂದು ಯಾರಿಗೂ ನೋವಾಗದಂತೆ ನಾಜೂಕಾಗಿ ಕೆಲಸ ನಿರ್ವಹಿಸಬೇಕಾಗಿದೆ.
ಹೀಗಾಗಿ ರಾಹುಲ್ ಗಾಂಧಿ ಜತೆ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಕುಮಾರಸ್ವಾಮಿ ಚರ್ಚೆ ನಡೆಸಲಿದ್ದಾರೆ. ಕಳೆದ ಬಾರಿ ಸಚಿವ ಸಂಪುಟ ವಿಸ್ತರಣೆ ಮಾಡಿದಾಗ ಉಂಟಾದ ಅಸಮಾಧಾನಗಳು ಮತ್ತೆ ಆಗದಂತೆ ತಡೆಯಲು ರಾಹುಲ್ ಜತೆ ಸಿಎಂ ಚರ್ಚೆ ನಡೆಸಲಿದ್ದಾರೆ. ಹೀಗಾಗಿ ಒಂದು ದಿನ ಮೊದಲೇ ದೆಹಲಿಗೆ ತೆರಳಲಿದ್ದಾರೆ.