ಆಕ್ಸಿಜನ್ ಬಗ್ಗೆ ಸುಳ್ಳು ಮಾಹಿತಿ ಕೊಟ್ಟಿತೇ ಕೇಜ್ರಿವಾಲ್ ಸರ್ಕಾರ?

ಶುಕ್ರವಾರ, 25 ಜೂನ್ 2021 (17:42 IST)
ನವದೆಹಲಿ: ಕೊರೋನಾ ಎರಡನೇ ಅಲೆ ಮಿತಿಮೀರಿದ್ದಾಗ ದೆಹಲಿ ಸರ್ಕಾರ ಕೇಂದ್ರದಿಂದ ಆಕ್ಸಿಜನ್ ಪೂರೈಕೆಗೆ ಅಗತ್ಯಕ್ಕಿಂತ ಹೆಚ್ಚು ಬೇಡಿಕೆಯಿಟ್ಟಿತ್ತು ಎಂದು ಸುಪ್ರೀಂಕೋರ್ಟ್ ನಿಯಮಿತ ತನಿಖಾ ಸಮಿತಿ ವರದಿ ಹೇಳಿದೆ.


ಅಗತ್ಯಕ್ಕಿಂತ ನಾಲ್ಕು ಪಟ್ಟು ಅಧಿಕ ಆಕ್ಸಿಜನ್ ಬೇಕೆಂದು ಕೇಜ್ರಿವಾಲ್ ಸರ್ಕಾರ ಸುಳ್ಳು ಮಾಹಿತಿ ನೀಡಿತ್ತು ಎಂದು ತನಿಖಾ ಸಮಿತಿ ಹೇಳಿದೆ ಎಂದು ಆಂಗ್ಲ ಮಾಧ್ಯಮ ವರದಿ ಹೇಳಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಪಿಯೂಷ್ ಗೋಯಲ್ ಇದಕ್ಕೆ ಕೇಜ್ರಿವಾಲ್ ಸರ್ಕಾರವೇ ಹೊಣೆ ಹೊರಬೇಕು.  ಕೇಜ್ರಿವಾಲ್ ಸರ್ಕಾರ ಅಗತ್ಯಕ್ಕಿಂತ ಹೆಚ್ಚು ಲೆಕ್ಕ ತೋರಿಸಿ ಆಕ್ಸಿಜನ್ ಪಡೆದಿದ್ದರೆ ಅಗತ್ಯವಿರುವ ಇತರ ರಾಜ್ಯಗಳಿಗೆ ಆಕ್ಸಿಜನ್ ಪೂರೈಕೆ ಕಡಿಮೆಯಾಯಿತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ