ಮೋದಿ ಸರ್ಕಾರ ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂತು ಎಂದು ಸಚಿವ ನಿತಿನ್ ಗಡ್ಕರಿ ಹೇಳಿದ್ದ ವಿಡಿಯೋ ನಿಜವೇ?
ನಟ ನಾನಾ ಪಾಟೇಕರ್ ನಿರೂಪಿಸಿದ ಮಾತುಕತೆಯೊಂದರಲ್ಲಿ ನಿತಿನ್ ಗಡ್ಕರಿ ‘ಕಳೆದ ಚುನಾವಣೆಯಲ್ಲಿ ನಮಗೆ ಅಧಿಕಾರ ಸಿಗುವುದು ಕಷ್ಟ ಎಂದು ಗೊತ್ತಾಗಿತ್ತು. ಹೀಗಾಗಿ ನಮ್ಮವರೇ ಸುಳ್ಳು ಆಶ್ವಾಸನೆಗಳನ್ನು ಕೊಡಲು ಸಲಹೆ ನೀಡಿದರು. ಅದರಂತೆ ನಾವು ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದೆವು. ಈಗ ಜನರು ಅದನ್ನು ನಮಗೆ ನೆನಪಿಸುತ್ತಿದ್ದಾರೆ. ಆದರೆ ನಮಗೆ ಅದನ್ನು ಪೂರೈಸಲು ಸಾಧ್ಯವಿಲ್ಲದ ಕಾರಣ ನಕ್ಕು ಮುಂದೆ ಹೋಗುತ್ತಿದ್ದೇವೆ’ ಎಂದು ಕಾಂಗ್ರೆಸ್ ಪ್ರಕಟಿಸಿರುವ ವಿಡಿಯೋದಲ್ಲಿ ಗಡ್ಕರಿ ಹೇಳುತ್ತಾರೆ.
ಆದರೆ ಇದರ ನಿಜಾಂಶ ತಿಳಿದುಬಂದಿಲ್ಲ. ಹಾಗಿದ್ದರೂ ಕಾಂಗ್ರೆಸ್ ಈ ವಿಡಿಯೋ ಹರಿಯಬಿಟ್ಟು ಕೇಂದ್ರ ಸಚಿವರೇ ಸತ್ಯ ಒಪ್ಪಿಕೊಂಡಿದ್ದಾರೆ ಎಂದು ಲೇವಡಿ ಮಾಡುತ್ತಿದೆ.