ಸನಾತನ ಧರ್ಮವನ್ನು ಡೆಂಗ್ಯೂಗೆ ಹೋಲಿಸಿದ್ದ ಉದಯನಿಧಿಗೆ ಡಿಸಿಎಂ ಪಟ್ಟಕ್ಕೆ ಸ್ವಪಕ್ಷೀಯರಿಂದಲೇ ವಿರೋಧ

Krishnaveni K

ಸೋಮವಾರ, 30 ಸೆಪ್ಟಂಬರ್ 2024 (16:31 IST)
Photo Credit: X
ಚೆನ್ನೈ: ಸನಾತನ ಧರ್ಮ ಎಂದರೆ ಡೆಂಗ್ಯೂ, ಮಲೇರಿಯಾದಂತೆ ಡೇಂಜರ್ ಎಂದು ಅವಹೇಳನ ಮಾಡಿದ್ದ ಉದಯನಿಧಿ ಈಗ ತಮಿಳುನಾಡು ಉಪಮುಖ್ಯಮಂತ್ರಿಯಾಗಿದ್ದಾರೆ.

ಮುಖ್ಯಮಂತ್ರಿ ಸ್ಟಾಲಿನ್ ತಮ್ಮ ಪುತ್ರ ಉದಯನಿಧಿಗೆ ಪಟ್ಟ ಕಟ್ಟಿದ್ದು, ಭವಿಷ್ಯದಲ್ಲಿ ತಮ್ಮ ಉತ್ತರಾಧಿಕಾರಿ ಎಂದು ಸೂಚನೆ ನೀಡಿದ್ದಾರೆ. ಕರುಣಾನಿಧಿ ಬಳಿಕ ಡಿಎಂಕೆ ಪಕ್ಷದ ಚುಕ್ಕಾಣಿ ಹಿಡಿದಿದ್ದ ಸ್ಟಾಲಿನ್ ಬಳಿಕ ಮುಖ್ಯಮಂತ್ರಿಯಾದರು. ಈಗ ಉದಯನಿಧಿಗೆ ಉಪಮುಖ್ಯಮಂತ್ರಿ ಪಟ್ಟಿ ಕಟ್ಟಲಾಗಿದ್ದು, ಮುಂದೆ ಅವರೇ ಡಿಎಂಕೆಯ ಮುಖ್ಯಮಂತ್ರಿ ಅಭ್ಯರ್ಥಿ ಎನ್ನುವುದು ಖಚಿತವಾಗಿದೆ.

ಆದರೆ ಉದಯನಿಧಿಯನ್ನು ಉಪಮುಖ್ಯಮಂತ್ರಿ ಮಾಡಿದ್ದು ಪಕ್ಷದೊಳಗೇ ಕೆಲವರಿಂದ ವಿರೋಧ ವ್ಯಕ್ತವಾಗಿದೆ. ಉದಯನಿಧಿಗೆ ಸಚಿವ ಸ್ಥಾನ ನೀಡಿದ್ದಕ್ಕೇ ಡಿಎಂಕೆಯ ಕೆಲವು ಹಿರಿಯ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದರು. ಇದೀಗ ಉಪಮುಖ್ಯಮಂತ್ರಿ ಪಟ್ಟ ನೀಡಿರುವುದು ಅಸಮಾಧಾನ ಹೆಚ್ಚುವಂತೆ ಮಾಡಿದೆ.

ತಮಿಳುನಾಡು ಹಾಲಿ ಸಿಎಂ ಸ್ಟಾಲಿನ್ ಆರೋಗ್ಯ ಈಗ ಮೊದಲಿನಷ್ಟು ಚೆನ್ನಾಗಿಲ್ಲ. ಇಂತಹ ಸಂದರ್ಭದಲ್ಲಿಯೇ ಅವರು ಮಗನಿಗೆ ಪಟ್ಟ ಕಟ್ಟಿದ್ದಾರೆ. ಅಂದರೆ ಮುಂದಿನ ದಿನಗಳಲ್ಲಿ ತಮ್ಮ ಆರೋಗ್ಯ ಕೈಕೊಟ್ಟರೆ ಉದಯನಿಧಿಗೇ ಮುಖ್ಯಮಂತ್ರಿ ಪಟ್ಟ ನೀಡುವುದು ಗ್ಯಾರಂಟಿಯಾಗಿದೆ. ಹೀಗಾಗಿ ಕೆಲವು ಹಿರಿಯ ನಾಯಕರು ಅಸಮಾಧಾನಗೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ