ಪತಿಯ ಲೈಂಗಿಕ ಕಾಟವನ್ನು ತಾಳಲಾರದ ಪತ್ನಿ ಮಾಡಿದ್ದೇನು ಗೊತ್ತಾ?

ಸೋಮವಾರ, 3 ಆಗಸ್ಟ್ 2020 (08:16 IST)
ಚೆನ್ನೈ : ಪತಿಯ ಲೈಂಗಿಕ ಕಾಟವನ್ನು ತಾಳಲಾರದೆ ಪತ್ನಿಯೇ ಆತನನ್ನು ಕೊಲೆ ಮಾಡಿದ ಘಟನೆ ತಮಿಳುನಾಡಿನ ಮಧುರೈನಲ್ಲಿ ನಡೆದಿದೆ.

ಸುಂದರ್(34)ವರ್ಷ ಮೃತಪಟ್ಟ ಪತಿ. ಈತ ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದು, ಸರ್ಕಾರಿ ಶಾಲಾ ಶಿಕ್ಷಕಿಯೊಂದಿಗೆ ಮದುವೆಯಾಗಿದ್ದು ಒಬ್ಬ ಪುತ್ರಿ ಇದ್ದಾಳೆ. ಆದರೆ ಈತ ತನ್ನ ಪತ್ನಿಗೆ ಅಸ್ವಾಭಾಮಿಕ ಲೈಂಗಿಕ ಕ್ರಿಯೆ ನಡೆಸುವಂತೆ ಒತ್ತಾಯಿಸುತ್ತಿದ್ದ. ಇದಕ್ಕೆ ಆಕೆ ಒಪ್ಪಿಕೊಳ್ಳದಿದ್ದಾಗ ಆಕೆಯ ಮೇಲೆ ಹಲ್ಲೆ ಮಾಡುತ್ತಿದ್ದ. ಈತನ ವರ್ತನೆ ದಿನದಿಂದ ದಿನಕ್ಕೆ ಮಿತಿಮೀರುತ್ತಿದ್ದ ಕಾರಣ ಪತ್ನಿ ರಾತ್ರಿ ಹಾಲಿಗೆ ನಿದ್ರೆ ಮಾತ್ರೆ ಹಾಕಿ ಆತ ನಿದ್ರೆಗೆ ಜಾರಿದ ಬಳಿಕ ತನ್ನ ಸಂಬಂಧಿಕರಿಬ್ಬರ ಜೊತೆ ಸೇರಿ ಆತನ ಉಸಿರುಗಟ್ಟಿಸಿ ಸಾಯಿಸಿದ್ದಾಳೆ.

ಆದರೆ ತನ್ನ ಪತಿ ಪ್ರಜ್ಞೆ ತಪ್ಪಿದ್ದಾನೆ ಎಂದು ಆಸ್ಪತ್ರೆಗೆ ದಾಖಲಿಸಿದ ಹಿನ್ನಲೆಯಲ್ಲಿ ವೈದ್ಯರು ಪರಿಶಿಲನೆ ನಡೆಸಿದಾಗ ಆತನ ಗುಪ್ತಾಂಗಗಳಲ್ಲಿ ಗಾಯಗಳಿರುವುದು ಕಂಡುಬಂದಿದೆ. ಆದಕಾರಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಅನುಮಾನಗೊಂಡ ಪೊಲೀಸರು ಪತ್ನಿಯನ್ನು ವಿಚಾರಣೆ ಮಾಡಿದ್ದಾರೆ. ಆಗ ಆಕೆ ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ