ಪತ್ನಿ ಪ್ರಿಯಕರನಿಗೆ ಬುದ್ದಿವಾದ ಹೇಳಲು ಹೋದ ಪತಿಗೆ ಏನಾಯಿತು ಗೊತ್ತಾ?
ಶುಕ್ರವಾರ, 1 ಡಿಸೆಂಬರ್ 2023 (13:01 IST)
ಮೃತ ಆಟೋ ಚಾಲಕನ ಪತ್ನಿಗೆ ನೆರೆಮನೆಯ ಆರೋಪಿಯ ಜೊತೆ ಅಕ್ರಮ ಸಂಬಂಧವಿತ್ತು. ಇದನ್ನು ತಿಳಿದ ಆಟೊ ಚಾಲಕ ಆರೋಪಿಗೆ ತನ್ನ ಪತ್ನಿಯಿಂದ ದೂರವಿರುವಂತೆ ಎಚ್ಚರಿಕೆ ನೀಡಿದ್ದ. ಇದರಿಂದ ಕೋಪಗೊಂಡ ಆರೋಪಿ ಚಾಕುವಿನಿಂದ 14 ಬಾರಿ ಇರಿದು ಕೊಲೆ ಮಾಡಿದ ಹೇಯ ಘಟನೆ ವರದಿಯಾಗಿದೆ.
ಅಕ್ರಮ ಸಂಬಂಧದ ಹಿನ್ನಲೆಯಲ್ಲಿ ಆಟೋಚಾಲಕನನ್ನು ಆತನ ಪತ್ನಿಯ ಪ್ರಿಯಕರ ಕೊಲೆ ಮಾಡಿದ ಘಟನೆ ಮುಂಬೈನ ದಾದರ್ ಪ್ರದೇಶದಲ್ಲಿ ನಡೆದಿದೆ.
ಈ ಬಗ್ಗೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.