ಪತಿಯ ಹಣ ಲೂಟಿಹೊಡೆಯಲು ಪತ್ನಿಯೇ ಸ್ಕೇಚ್

ಶುಕ್ರವಾರ, 1 ಡಿಸೆಂಬರ್ 2023 (12:24 IST)
ವ್ಯಕ್ತಿಯನ್ನು ಬಿಡುಗಡೆ ಮಾಡಲು ಆರೋಪಿಗಳು ಹಣದ ಬೇಡಿಕೆ ಇಟ್ಟ  ಹಿನ್ನಲೆಯಲ್ಲಿ ಅನುಮಾನಗೊಂಡ ವ್ಯಕ್ತಿಯ ಸ್ನೇಹಿತರು
ಪೊಲೀಸರಿಗೆ ಮಾಹಿತಿ ನೀಡಿದ್ದು ಪೊಲೀಸರು ಅಪಹರಣಕ್ಕೊಳಗಾದ ವ್ಯಕ್ತಿಯನ್ನು ರಕ್ಷಿಸಿದ್ದಾರೆ ಎನ್ನಲಾಗಿದೆ. 
 
ಇದೀಗ  ಅಪಹರಿಸಿದ ಆರೋಪಿಗಳನ್ನು ಬಂಧಿಸಲಾಗಿದ್ದು, ಅಪಹರಣಕ್ಕೆ ಪತ್ನಿಯೇ ಮೂಲ ಗ್ಯಾಂಗ್‌ಲೀಡರ್ ಎನ್ನುವುದು ಪೊಲೀಸರ ತನಿಖೆಯಿಂದ ಬಹಿರಂಗವಾಗಿದೆ. ಹಣಕ್ಕಾಗಿ  ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ 36 ವರ್ಷದ ವ್ಯಕ್ತಿಯನ್ನು ಮೂವರು ಅಪಹರಿಸಿದ ಘಟನೆ ದೆಹಲಿಯಲ್ಲಿ ವರದಿಯಾಗಿದೆ.
 
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ನಡೆಸಿದಾಗ ಪ್ರೇಮಿಯ ಜೊತೆ ಸೇರಿ ಪತಿಯ ಹಣವನ್ನು ಲೂಟಿ ಮಾಡಲು ಸಂತ್ರಸ್ತ  ವ್ಯಕ್ತಿಯ ಪತ್ನಿ ಈ ತಂತ್ರ ರೂಪಿಸಿದ್ದಾಳೆ ಎಂಬುದಾಗಿ ತಿಳಿದುಬಂದಿದೆ. ವಿಚಾರಣೆ ನಡೆಸಿ ಇದಕ್ಕೆ ಸಂಬಂಧಪಟ್ಟ ಆರೋಪಿಗಳನ್ನು ಬಂಧಿಸಲಾಗಿದೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ