ವರದಕ್ಷಿಣೆ ನೀಡಲಿಲ್ಲವೆಂದು ಪತ್ನಿಗೆ ಪತಿ ಮಾಡಿದ್ದೇನು ಗೊತ್ತಾ?
ಸೋಮವಾರ, 25 ನವೆಂಬರ್ 2019 (10:57 IST)
ಪಾಟ್ನಾ : ವರದಕ್ಷಿಣೆ ನೀಡಲಿಲ್ಲವೆಂದು ಪತಿಯೊಬ್ಬ ಪತ್ನಿಯನ್ನು ವೇಶ್ಯಾವಾಟಿಕೆಗೆ ಮಾರಿದ ಘಟನೆ ಬಿಹಾರದ ಕತಿಹಾರ್ ನಲ್ಲಿ ನಡೆದಿದೆ.
7 ವರ್ಷಗಳ ಹಿಂದೆ ಸಂತ್ರಸ್ತೆಗೆ ಮೊಹಮ್ಮದ್ ಶಮೀಮ್ ಎಂಬುವವನ ಜೊತೆ ಮದುವೆಯಾಗಿತ್ತು. ಆದರೆ ಮದುವೆಯಾದಾಗಿನಿಂದ ವರದಕ್ಷಿಣೆ ಹಣಕ್ಕಾಗಿ ಕಿರುಕುಳ ನೀಡುತ್ತಿದ್ದ ಪತಿ, ಪತ್ನಿ ಹಣ ನೀಡಲಿಲ್ಲವೆಂದು ಆಕೆಗೆ ಪ್ರಜ್ಞೆ ತಪ್ಪುವ ಮಾತ್ರೆ ನೀಡಿ ಆಕೆಯನ್ನು 4 ವರ್ಷಗಳ ಹಿಂದೆ ಉತ್ತರ ಪ್ರದೇಶದ ಕಾನ್ಪುರದ ವೇಶ್ಯಾವಾಟಿಕೆಗೆ ಮಾರಾಟ ಮಾಡಿದ್ದಾನೆ.
ಆದರೆ ಇದೀಗ ವೇಶ್ಯಾವಾಟಿಕೆ ಜಾಲದಿಂದ ಹೇಗೋ ತಪ್ಪಿಸಿಕೊಂಡ ಬಂದ ಪತ್ನಿ ತವರು ಮನೆ ಸೇರಿ ಘಟನೆಯ ಬಗ್ಗೆ ತಿಳಿಸಿದ್ದಾಳೆ. ಬಳಿಕ ಸಂತ್ರಸ್ತೆ ಪತಿಯ ವಿರುದ್ಧ ಕೋಡಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಆರೋಪಿಗಳನ್ನು ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ ಎನ್ನಲಾಗಿದೆ.