ಪ್ರಧಾನಿ ಮೋದಿಯ ಅಚ್ಚೇ ದಿನ್‌ ಯಾರಿಗೆ ಬಂದಿದೆ ಗೊತ್ತಾ?: ರಾಹುಲ್ ಗಾಂಧಿ

ಬುಧವಾರ, 29 ನವೆಂಬರ್ 2023 (08:47 IST)
ಪ್ರತಿಯೊಬ್ಬರು ಮೋದಿಯವರ ಅಚ್ಚೇ ದಿನ್ ಭರವಸೆಯ ಬಗ್ಗೆ ಮಾತನಾಡಿ ಲೇವಡಿ ಮಾಡುತ್ತಿದ್ದಾರೆ. ಮೋದಿ ಇಂದು ಅಮೆರಿಕದಲ್ಲಿ , ನಾಳೆ ಇಂಗ್ಲೆಂಡ್‌ನಲ್ಲಿ ನಾಡಿದ್ದು ಮತ್ತೊಂದು ದೇಶದಲ್ಲಿ ಪ್ರವಾಸ ಮಾಡುತ್ತಿರುತ್ತಾರೆ. ಪ್ರಧಾನಿ ಮೋದಿಯವರ ವಿದೇಶ ಪ್ರವಾಸದ ಬಗ್ಗೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
 
ನರೇಂದ್ರ ಮೋದಿ ವಿದೇಶ ಪ್ರವಾಸ ಮಾಡುತ್ತಾ ತಮಗಾಗಿ ಅಚ್ಚೇ ದಿನ್ ತಂದಿದ್ದಾರೆ. ಆದರೆ, ರೈತರು ಕೃಷಿ ಭೂಮಿಯಲ್ಲಿ ತಮ್ಮ ಅಚ್ಚೇ ದಿನ್‌ಗಳಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಆದರೆ, ಸದಾ ನಾನು ನಿಮ್ಮ ಜೊತೆಯಲ್ಲಿರುತ್ತೇನೆ ಎಂದು ಹೇಳಿದ್ದಾರೆ.
 
ಪ್ರಧಾನಮಂತ್ರಿ ನರೇಂದ್ರ ಮೋದಿ ದೇಶದ ರೈತರನ್ನು ಮರೆತು ವಿದೇಶ ಪ್ರವಾಸಗಳಲ್ಲಿಯೇ ಮುಳುಗಿದ್ದಾರೆ. ಆದರೆ, ನಾನು ನಿಮ್ಮೊಂದಿಗಿದ್ದೇನೆ ಎಂದು ರೈತರಿಗೆ ಭರವಸೆ ನೀಡಿದ್ದಾರೆ.
 
ಉತ್ತರಪ್ರದೇಶದ ಸರಕಾರ 75 ಜಿಲ್ಲೆಗಳಲ್ಲಿ 50 ಜಿಲ್ಲೆಗಳು ಬರಪೀಡಿತ ಎಂದು ಘೋಷಿಸಿದ ನಂತರ ರಾಹುಲ್ ಗಾಂಧಿ, ಉತ್ತರಪ್ರದೇಶದ ಭಟ್ಟಾ-ಪರ್ಸೌಲ್‌ನಿಂದ ಅಲಿಗಢ್‌ವರೆಗೆ ಪಾದಯಾತ್ರೆ ಆರಂಭಿಸಿದ್ದರು. 
 
ರೈತರಿಗೆ ಅಚ್ಚೇ ದಿನ್ ಬಂದಾಗ ಕಾಂಗ್ರೆಸ್ ಪಕ್ಷಕ್ಕೆ ಕೂಡಾ ಅಚ್ಚೇ ದಿನ್‌ಗಳು ಬರಲಿವೆ ಎಂದರು. ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ , ರಾಜ್ಯವನ್ನು ಅಭಿವೃದ್ಧಿ ಪಥದತ್ತ ಸಾಗಿಸುವುದಾಗಿ ಭರವಸೆ ನೀಡಿದ್ದರು. ಉಳಿದಿರುವ ಅಧಿಕಾರವಧಿಯಲ್ಲಿ ಅಭಿವೃದ್ಧಿಯನ್ನು ಮಾಡಿ ತೋರಿಸಿ ಎಂದು ರಾಹುಲ್ ಗಾಂಧಿ ಸಲಹೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ