ಊಟ ಬಡಿಸುವುದು ತಡವಾಗಿದೆ ಎಂದು ಮದುವೆ ಬೇಡ ಎಂದ ವರ!

ಸೋಮವಾರ, 21 ಫೆಬ್ರವರಿ 2022 (15:02 IST)
ಪಾಟ್ನಾ : ಮದುವೆ ಹೀಗೆ ಇರಬೇಕು ಎನ್ನುವ ಕಸನು ಎಲ್ಲರಲ್ಲಿಯೂ ಇರುತ್ತದೆ.

ಇಲ್ಲೊಬ್ಬ ವರ ಊಟ ಬಡಿಸುವುದು ತಡವಾಗಿದೆ ಎಂದು ಮದುವೆಯನ್ನು ಮುರಿದುಕೊಂಡು ಜಾಗಾ ಖಾಲಿ ಮಾಡಿರುವ ಘಟನೆ ನಡೆದಿದೆ.

ವರನೊಬ್ಬ ತನ್ನ ಕುಟುಂಬಕ್ಕೆ ತಡವಾಗಿ ಊಟ ಬಡಿಸಿದ್ದಾರೆ ಎನ್ನುವ ಕಾರಣಕ್ಕೆ ಮದುವೆಯಾಗಲು ನಿರಾಕರಿಸಿದ್ದಾನೆ. ಈ ಘಟನೆಯು ಪುರ್ನಿಯಾದ ಮೊಹಾನಿ ಪಂಚಾಯತ್ನ ಬಟೌನಾ ಗ್ರಾಮದ ಈಸ್ವರಿ ಟೋಲಾದಲ್ಲಿ ನಡೆದಿದೆ. 

ವಿವಾಹ ವಿಧಿ ವಿಧಾನಗಳು ನಡೆಯುತ್ತಿದ್ದರಿಂದ ವರನ ಕುಟುಂಬದ ಸದಸ್ಯರಿಗೆ ಊಟ ಬಡಿಸಲು ತಡವಾಗಿದೆ. ಇದು ವರನ ತಂದೆಯನ್ನು ತುಂಬಾ ಕೆರಳಿಸಿತು, ಅವರು ಮದುವೆ ಸಮಾರಂಭದಲ್ಲಿ ನಾನು ಇರುವುದಿಲ್ಲ, ಮನೆಗೆ ಹೋಗುತ್ತೇನೆ ಎಂದು ಹೇಳುತ್ತ ಸಿಟ್ಟಾಗಿದ್ದಾರೆ.

ಈ ವೇಳೆ ಸ್ಥಳೀಯರು ಹಾಗೂ ಪಂಚಾಯಿತಿಯವರು ಮಧ್ಯ ಪ್ರವೇಶಿಸಿ ಎರಡು ಕಡೆಯವರ ನಡುವೆ ಸಮಸ್ಯೆ ಬಗೆಹರಿಸಲು ಯತ್ನಿಸಿದರು. ಆದರೆ ಅಷ್ಟೊತ್ತಿಗಾಗಲೇ ವರನು ಮಂಟಪದಿಂದ ಎದ್ದು ಹೋಗಿದ್ದನು. ಹೀಗಾಗಿ ಮದುವೆಯನ್ನು ನಿಲ್ಲಿಸಬೇಕಾಯಿತು. 

ವರನ ತಂದೆ ವಧುವಿನ ಕುಟುಂಬಕ್ಕೆ ಮದುವೆಗೆ ಅಡುಗೆ ಮಾಡಲು ತಗಲುವ ವೆಚ್ಚ, ಬೈಕ್ ಮತ್ತು ವರನಿಗೆ ಪಡೆದ ಇತರ ಎಲ್ಲಾ ಉಡುಗೊರೆಗಳನ್ನು ವಾಪಸ್ ನೀಡಿದ್ದಾರೆ. ವಧುವಿನ ತಾಯಿ ಇದೀಗ ವರ ಮತ್ತು ಆತನ ತಂದೆ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ