ಲೋಕಸಭೆ ಚುನಾವಣೆ ಬಗ್ಗೆ ಈ ಸುಳ್ಳು ಸುದ್ದಿ ನಂಬಬೇಡಿ

Krishnaveni K

ಸೋಮವಾರ, 26 ಫೆಬ್ರವರಿ 2024 (11:27 IST)
ನವದೆಹಲಿ: ಇತ್ತೀಚೆಗಿನ ದಿನಗಳಲ್ಲಿ ಸುಳ್ಳು ಸುದ್ದಿಗಳು ಹರಡಿ ಅದನ್ನೇ ಜನ ನಿಜವೇನೋ ಎಂದು ನಂಬುವ ನಿದರ್ಶನಗಳು ಅನೇಕ ಬಾರಿ ನಡೆಯುತ್ತಿದೆ. ಇದೀಗ ಲೋಕಸಭೆ ಚುನಾವಣೆ ವಿಚಾರದಲ್ಲೂ ಸುಳ್ಳು ಸುದ್ದಿಯೊಂದು ಹರಿದಾಡುತ್ತಿದೆ.

ಇನ್ನೇನು ಕೆಲವೇ ದಿನಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಆದರೆ ಚುನಾವಣಾ ಆಯೋಗ ಇನ್ನೂ ಚುನಾವಣೆ ದಿನಾಂಕ ಘೋಷಿಸಿಲ್ಲ. ಆದರೆ ಕೆಲವೆಡೆ ಈಗಾಗಲೇ ಏಪ್ರಿಲ್ 19 ರಂದು ಚುನಾವಣೆ, ಮೇ 22 ಕ್ಕೆ ಫಲಿತಾಂಶ ಬರಲಿದೆ ಎಂಬ ಸುಳ್ಳು ಸುದ್ದಿಯೊಂದು ಹರಿದಾಡುತ್ತಿದೆ. ಇದನ್ನು ಕೆಲವರು ನಿಜವೆಂದೇ ನಂಬಿದ್ದಾರೆ.

ಆದರೆ ಲೋಕಸಭೆ ಚುನಾವಣೆ ದಿನಾಂಕದ ಬಗ್ಗೆ ಸುಳ್ಳು ಸುದ್ದಿ ಹರಡುತ್ತಿದ್ದಂತೇ ಚುನಾವಣಾ ಆಯೋಗ ಸ್ಪಷ್ಟನೆ ನೀಡಿದೆ. ಲೋಕಸಭೆ ಚುನಾವಣೆ ದಿನಾಂಕದ ಬಗ್ಗೆ ಇದೀಗ ಹರಿದಾಡುತ್ತಿರುವ ಸುದ್ದಿ ಸುಳ್ಳು. ಮಾರ್ಚ್ 12 ರ ವೇಳೆಗೆ ಸ್ಪಷ್ಟವಾಗಿ ದಿನಾಂಕ ಪ್ರಕಟಿಸುವುದಾಗಿ ಚುನಾವಣಾ ಆಯೋಗ ಸ್ಪಷ್ಟನೆ ನೀಡಿದೆ.

ಚುನಾವಣೆ ಕುರಿತಾದ ಎಲ್ಲಾ ವಿಚಾರಗಳನ್ನೂ ಆಯೋಗ ಪತ್ರಿಕಾಗೋಷ್ಠಿ ನಡೆಸಿ ಅಧಿಕೃತವಾಗಿ ಘೋಷಿಸಲಿದೆ. ವ್ಯಾಟ್ಸಪ್, ಸೋಷಿಯಲ್ ಮೀಡಿಯಾ ಮೂಲಕ ಯಾವುದೇ ಸಂದೇಶ ಕಳುಹಿಸುವುದಿಲ್ಲ. ಚುನಾವಣಾ ಆಯೋಗದ ಲೆಟರ್ ಹೆಡ್ ಇಲ್ಲದ ಯಾವುದೇ ವರದಿಗಳನ್ನು ನಂಬಬೇಡಿ ಎಂದು ಸೂಚನೆ ನೀಡಿದೆ.

ಇದಕ್ಕೆ ಮೊದಲು ಮಾರ್ಚ್ 28 ರಂದು ನಾಮಪತ್ರ ಸಲ್ಲಿಕೆಗೆ ಕೊನೆ ದಿನಾಂಕ, ಏಪ್ರಿಲ್ 19 ರಂದು ಚುನಾವಣೆ ಮೇ 22 ಕ್ಕೆ ಫಲಿತಾಂಶ ಎಂಬ ಸುದ್ದಿ ಹರಿದಾಡುತ್ತಿತ್ತು. ಆದರೆ ಇದೆಲ್ಲವೂ ವದಂತಿ. ಇಂತಹ ಸುದ್ದಿಗಳನ್ನು ನಂಬಬೇಡಿ ಎಂದು ಆಯೋಗ ಮನವಿ ಮಾಡಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ