ರಾಮ್ ರಹೀಮ್, ಹನಿಪ್ರೀತ್ ಹೆಸರಿನ ಈ ಕತ್ತೆಗಳು ಸೇಲ್ ಆಗಿದ್ದು ಎಷ್ಟಕ್ಕೆ ಗೊತ್ತಾ…?
ಮಧ್ಯಪ್ರದೇಶ: ಉಜ್ಜೈನಿಯಲ್ಲಿ ನಡೆದ ಕತ್ತೆಗಳ ಮೇಳದಲ್ಲಿ ಖ್ಯಾತ ಹಾಗೂ ಕುಖ್ಯಾತ ನಾಮರ ಹೆಸರು ಹೊಂದಿದ್ದ ಕತ್ತೆಗಳು ಭಾರಿ ಬೆಲೆಗೆ ಮಾರಾಟವಾಗಿವೆ.
ಗುರ್ಮೀತ್, ಹನಿಪ್ರೀತ್ ಹೆಸರಿನ ಕತ್ತೆಗಳಿಗೆ 20 ಸಾವಿರ ರೂ. ನೀಡಿ ಖರೀದಿಸಲು ಜನ ಸಿದ್ಧರಿದ್ದರು. ಆದರೆ ಕೊನೆಗೆ 11 ಸಾವಿರ ರೂ.ಗೆ ಈ ಕತ್ತೆಗಳು ಮಾರಾಟವಾಗಿವೆ. ಮೇಳದಲ್ಲಿ ಸುಮಾರು 2 ಸಾವಿರ ಕತ್ತೆಗಳು ಸೇರಿದ್ದವು. ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನದಿಂದ ಜನ ಕತ್ತೆಗಳನ್ನು ತಂದಿದ್ದರು.