ಭಾರತೀಯ ಸೇನೆಗೆ ಹೆಚ್ಚಲಿದೆ ಬಲ: ಮಾನವರಹಿತ ಯುದ್ಧ ಟ್ಯಾಂಕರ್ ಶೀಘ್ರ ಸೇನೆಗೆ ಸೇರ್ಪಡೆ

ಭಾನುವಾರ, 30 ಜುಲೈ 2017 (11:51 IST)
ಚೆನ್ನೈ: ಭಾರತೀಯ ಸೇನೆಗೆ ಈಗ ಮತ್ತಷ್ಟು ಬಲಬಂದಂತಾಗಿದ್ದು, ಡಿಆರ್​ಡಿಒ ಮೊದಲ ಬಾರಿಗೆ ಮಾನವರಹಿತ ಯುದ್ಧ ಟ್ಯಾಂಕರ್ ’ಮಂತ್ರ’ವನ್ನು ಅಭಿವೃದ್ಧಿಪಡಿಸಿದ್ದು, ಕೆಲ ದಿನಗಳಲ್ಲೇ ಸೇನೆಗೆ ಸೇರ್ಪಡೆಯಾಗಲಿದೆ.
 
ಮಂತ್ರ  ಯುದ್ಧ ಟ್ಯಾಂಕರ್ ಸಂಪೂರ್ಣ ದೇಶಿಯ ನಿರ್ಮಿತ ಟ್ಯಾಂಕರ್ ಆಗಿದ್ದು, ಮೇಕ್ ಇನ್ ಇಂಡಿಯಾ ಪರಿಕಲ್ಪನೆಯಡಿಯಲ್ಲಿ ಸಂಶೋಧಿಸಲಾಗಿದೆ. ಶತ್ರುಪಡೆಗಳ ಮೇಲೆ ಬೇಹುಗಾರಿಕೆ ನಡೆಸಲು, ವಿಪತ್ತು ನಿರ್ವಹಣೆ, ಭೂ ಸರ್ವೆಕ್ಷಣೆ, ಬಾಂಬ್ ಪತ್ತೆ, ಪರಮಾಣು ಮತ್ತು ಜೈವಿಕ ಅಸ್ತ್ರ ಬಳಕೆಯಾದ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಲಿವೆಯಂತೆ.  ಚೀನಾ ಹಾಗೂ ಪಾಕಿಸ್ತಾನದಿಂದ ನಿರಂತರ ಕಿರುಕುಳ ಅನುಭವಿಸುತ್ತಿರುವ ಭಾರತಕ್ಕೆ ಈ ಅತ್ಯಾಧುನಿಕ ಟ್ಯಾಂಕರ್ ಗಳು ನೆರವಾಗಲಿದ್ದು, ಭಾರತದ ಭದ್ರತೆ ಮತ್ತೊಂದು ಸುತ್ತು ಗಟ್ಟಿಯಾಗಲಿದೆ ಎಂದು ತಜ್ಞರು  ಅಭಿಪ್ರಾಯಪಟ್ಟಿದ್ದಾರೆ. 
 
ಮಂತ್ರ ಟ್ಯಾಂಕರ್  ರಿಮೋಟ್  ಮೂಲಕ ನಿಯಂತ್ರಿಸಬಹುದಾದ ಮಾನವರಹಿತ ಟ್ಯಾಂಕ್ ಇದಾಗಿದ್ದು, ಡಿಆರ್​ಡಿಒ ಚೆನ್ನೈನ ಘಟಕದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಮಂತ್ರ ಟ್ಯಾಂಕರ್ ಗಳನ್ನು ಮೂರು ಮಾದರಿಗಳಾಗಿ ಅಭಿವೃದ್ಧಿಪಡಿಸಲಾಗಿದ್ದು, ಮಂತ್ರ-ಎಸ್, ಮಂತ್ರಾ- ಎಂ, ಮಂತ್ರಾ-ಎನ್ ಎಂದು ವಿಂಗಡಿಸಲಾಗಿದೆ.

ವೆಬ್ದುನಿಯಾವನ್ನು ಓದಿ