ನೀರು ಕುಡಿದು ವಿದ್ಯಾರ್ಥಿನಿ ಸಾವು. ಹಾಗಾದ್ರೆ ಆ ನೀರಿನಲ್ಲಿ ಇದ್ದದ್ದೇನು ಗೊತ್ತಾ?
ಶನಿವಾರ, 9 ಮಾರ್ಚ್ 2019 (06:49 IST)
ನವದೆಹಲಿ : 11 ವರ್ಷದ ಬಾಲಕಿಯೊಬ್ಬಳು ಆ್ಯಸಿಡ್ ಕುಡಿದು ಸಾವನಪ್ಪಿದ ಘಟನೆ ಈಶಾನ್ಯ ದೆಹಲಿಯ ಹರ್ಷ್ ವಿಹಾರ್ ಎಂಬ ಪ್ರದೇಶದಲ್ಲಿ ನಡೆದಿದೆ.
ಮೃತ ಬಾಲಕಿ ಖಾಸಗಿ ಶಾಲೆಯೊಂದರಲ್ಲಿ 5ನೇ ತರಗತಿಯಲ್ಲಿ ಓದುತ್ತಿದ್ದಳು. ವಿದ್ಯಾರ್ಥಿನಿಯೊಬ್ಬಳು ಗೊತ್ತಿಲ್ಲದೆ ಆ್ಯಸಿಡ್ ಮಿಶ್ರಿತ ನೀರು ತುಂಬಿದ್ದ ಬಾಟಲಿಯನ್ನು ಶಾಲೆಗೆ ತಂದಿದ್ದಳು. ಆ ವೇಳೆ ಗೆಳತಿ ತಂದಿದ್ದ ಬಾಟಲ್ ನಲ್ಲಿದ್ದ ನೀರನ್ನು ಕುಡಿದು ಬಾಲಕಿ ಸಾವನಪ್ಪಿದ್ದಾಳೆ.
ಈ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಬಾಟಲಿಯಲ್ಲಿ ಆ್ಯಸಿಡ್ ಮಿಶ್ರಿತ ನೀರು ಇತ್ತು, ಇದರಿಂದ ಬಾಲಕಿ ಸಾವನಪ್ಪಿರುವುದಾಗಿ ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.