ನವದೆಹಲಿ : ಜಾರಿ ನಿರ್ದೇಶನಾಲಯ ವನ್ 97 ಕಮ್ಯುನಿಕೇಷನ್ಸ್ ಲಿಮಿಟೆಡ್ನ ಪೇಟಿಯಂ ಹಾಗೂ ಪಾವತಿ ಪರಿಹಾರಗಳನ್ನು ಒದಗಿಸುವ ಪೇಯುನ ಕೆಲ ಕಚೇರಿ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸುತ್ತಿದೆ.
ಈ ಬಗ್ಗೆ ಮಾಹಿತಿ ನೀಡಿದ ಪೇಟಿಯಂ ವಕ್ತಾರರು, ಇಡಿ ವಿವಿಧ ಪಾವತಿ ಸೇವಾ ಪೂರೈಕೆದಾರರಿಂದ ಕೆಲವು ವ್ಯಾಪಾರಿಗಳ ಬಗ್ಗೆ ಮಾಹಿತಿಗಳನ್ನು ಪಡೆಯುತ್ತಿದೆ.
ಇತ್ತೀಚೆಗೆ ಇಡಿ ಆನ್ಲೈನ್ ಪಾವತಿಗಳ ವೇದಿಕೆಗಳಾದ ರೇಜರ್ಪೇ, ಪೇಟಿಯಂ ಹಾಗೂ ಕ್ಯಾಶ್ಫ್ರೀ ಕಂಪನಿಗಳ ಬೆಂಗಳೂರಿನ ಆವರಣಗಳಲ್ಲಿ ದಾಳಿ ನಡೆಸಿತ್ತು. ಈ ವೇಳೆ ಬೆಂಗಳೂರಿನ 6 ಸ್ಥಳಗಳಲ್ಲಿ ಶೋಧ ನಡೆಸಿದ್ದಾಗಿ ಇಡಿ ತಿಳಿಸಿತ್ತು.
ದಾಳಿಯ ವೇಳೆ ಚೀನೀ ವ್ಯಕ್ತಿಗಳಿಂದ ನಿಯಂತ್ರಿತವಾಗಿದ್ದ ಘಟಕಗಳ ಬ್ಯಾಂಕ್ ಖಾತೆಗಳಲ್ಲಿ ಇರಿಸಲಾಗಿದ್ದ 17 ಕೋಟಿ ರೂ. ಮೌಲ್ಯದ ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತನಿಖಾ ಸಂಸ್ಥೆ ಮಾಹಿತಿ ನೀಡಿತ್ತು. ಚೀನೀ ವ್ಯಕ್ತಿಗಳು ಭಾರತೀಯರ ನಕಲಿ ದಾಖಲೆಗಳನ್ನು ಬಳಸಿ, ವಂಚನೆ ನಡೆಸುತ್ತಿವೆ ಎಂದು ಇಡಿ ಆರೋಪಿಸಿದೆ.