ಚಿಕಿತ್ಸೆಗೆ ಹಣವಿಲ್ಲದೇ ಮಗುವಿನ ಜೀವ ತೆಗೆದ ಕುಟುಂಬಸ್ಥರು
ಕೆಮಿಕಲ್ ಫ್ಯಾಕ್ಟರಿಯೊಂದರಲ್ಲಿ ತಂದೆ-ತಾಯಿ ಕೆಲಸ ಮಾಡುತ್ತಿದ್ದರು. ಆದರೆ ಆ ಹಣ ಮಗುವಿನ ಚಿಕಿತ್ಸೆಗೆ ಸಾಕಾಗುತ್ತಿರಲಿಲ್ಲ. ಮಾರ್ಚ್ 8 ರಂದು ಮಗುವನ್ನು ಬಾವಿಗೆಸೆದು ಹತ್ಯೆ ಮಾಡಿದ ಅಜ್ಜಿ ಮತ್ತು ಮುತ್ತಜ್ಜಿ ಬರಿಗೈಯಲ್ಲಿ ವಾಪಸಾಗುತ್ತಿದ್ದುದನ್ನು ಊರಿನವರು ನೋಡಿದ್ದಾರೆ.
ಈ ಬಗ್ಗೆ ಅಜ್ಜಿಯಂದಿರನ್ನು ವಿಚಾರಣೆ ನಡೆಸಿದಾಗ ಅಜ್ಜಿಯಂದಿರು ತಪ್ಪೊಪ್ಪಿಕೊಂಡಿದ್ದಾರೆ. ಈ ವಿಚಾರ ಪೋಷಕರಿಗೂ ತಿಳಿದಿತ್ತು. ಅದಕ್ಕಾಗಿ ಅಂದು ಅವರು ಬೇಗನೇ ಫ್ಯಾಕ್ಟರಿಗೆ ತೆರಳಿದ್ದರು ಎಂದು ಬಾಯ್ಬಿಟ್ಟಿದ್ದಾರೆ. ಇದೀಗ ಆರೋಪಿಗಳನ್ನು ಬಂಧಿಸಲಾಗಿದೆ.