ನವದೆಹಲಿ: ರೈತ ಪ್ರತಿಭಟನೆ ಬಗ್ಗೆ ವಿದೇಶೀ ಹೋರಾಟಗಾರ್ತಿ ಗ್ರೇಟಾ ಧನ್ ಬರ್ಗ್ ಟ್ವೀಟ್ ಮಾಡಿ ಭಾರತದ ಆಂತರಿಕ ವಿಚಾರದಲ್ಲಿ ಮೂಗು ತೂರಿಸಿ ಶಾಂತಿ ಕದಡಲು ಯತ್ನಿಸಿದ್ದಕ್ಕೆ ದೆಹಲಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಆದರೆ ಈ ಎಫ್ಐಆರ್ ನಲ್ಲಿ ಅನಾಮಿಕರ ಮೇಲೆ ಪ್ರಕರಣ ದಾಖಲಿಸಿಕೊಂಡಿರುವುದಾಗಿ ನಮೂದಿಸಿದೆ. ಪಾಪ್ ಗಾಯಕಿ ರಿಹನ್ನಾ, ಹೋರಾಟಗಾರ್ತಿ ಗ್ರೇಟಾ ಸೇರಿದಂತೆ ವಿದೇಶಿಯರ ವಿರುದ್ಧ ದೆಹಲಿ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ಟ್ವೀಟ್ ನಲ್ಲಿ ಪೋಸ್ಟ್ ಆಗಿದ್ದ ಟೂಲ್ ಕಿಟ್ ನ್ನು ಖಾಲಿಸ್ತಾನ ಪರ ಹೋರಾಟಗಾರರು ಸೃಷ್ಟಿಸಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಇದಕ್ಕೆ ಸಂಬಂಧಪಟ್ಟವರ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ ಎಂದು ದೆಹಲಿ ಪೊಲೀಸರು ಹೇಳಿಕೆ ನೀಡಿದ್ದಾರೆ.