ನಮ್ಮ ದೇಶದ ವಿಚಾರದಲ್ಲಿ ಹೊರಗಿನವರಿಗೇನು ಕೆಲಸ? ರಿಹಾನ್ನಾ ವಿರುದ್ಧ ಸಿಡಿದೆದ್ದ ಸಚಿನ್ ತೆಂಡುಲ್ಕರ್

ಗುರುವಾರ, 4 ಫೆಬ್ರವರಿ 2021 (09:34 IST)
ಮುಂಬೈ: ರೈತರ ಪ್ರತಿಭಟನೆ ವಿಚಾರವಾಗಿ ಪಾಪ್ ಗಾಯಕಿ ರಿಹಾನ್ನಾ ಮಾಡಿದ ಟ್ವೀಟ್ ವಿರುದ್ಧ ಕ್ರಿಕೆಟ್ ದಿಗ್ಗಜ, ಭಾರತ ರತ್ನ ಸಚಿನ್ ತೆಂಡುಲ್ಕರ್ ಸಿಡಿದೆದ್ದಿದ್ದಾರೆ.


ನಮ್ಮ ದೇಶದ ವಿಚಾರದಲ್ಲಿ ಹೊರಗಿನವರು ಮೂಗು ತೂರಿಸಲು ಅವಕಾಶ ಕೊಡಬಾರದು ಎಂದು ಖಡಕ್ ಆಗಿ ಟ್ವೀಟ್ ಮಾಡಿರುವ ಸಚಿನ್, ದೇಶದ ಐಕ್ಯತೆ ಅಭಿಯಾನದಲ್ಲಿ ಕೈ ಜೋಡಿಸಿದ್ದಾರೆ. ‘ಭಾರತದ ಸಾರ್ವಭೌಮತೆ  ವಿಚಾರದಲ್ಲಿ ಯಾವುದೇ ಹೊಂದಾಣಿಕೆ ಮಾಡಿಕೊಳ್ಳಬಾರದು. ಬಾಹ್ಯ ಶಕ್ತಿಗಳು ಪ್ರೇಕ್ಷಕರಾಗಿರಬೇಕೇ ಹೊರತು, ಸಹಭಾಗಿಗಳಾಗಬಾರದು. ಭಾರತಕ್ಕೆ ಏನು ಬೇಕು ಎಂದು ನಿರ್ಧರಿಸಲು ಭಾರತಕ್ಕೆ ಗೊತ್ತು. ಒಂದೇ ದೇಶವಾಗಿ ಜೊತೆಯಾಗಿರೋಣ’ ಎಂದು ಸಚಿನ್ ಕರೆಕೊಟ್ಟಿದ್ದಾರೆ. ಸಚಿನ್ ಈ ಟ್ವೀಟ್ ಮಾಡುತ್ತಿದ್ದಂತೇ ಟ್ವಿಟರಿಗರು ಅವರಿಗೆ ಭಾರೀ ಬೆಂಬಲ ವ್ಯಕ್ತಪಡಿಸಿದ್ದಾರೆ. ಇಂದು ನೀವು ಭಾರತ ರತ್ನ ಬಿರುದು ಪಡೆದಿದ್ದಕ್ಕೂ ಸಾರ್ಥಕವಾಯಿತು ಎಂದಿದ್ದಾರೆ. ಹಾಲಿವುಡ್ ತಾರೆ, ನಮ್ಮ ದೇಶಕ್ಕೆ ಸಂಬಂಧವೇ ಪಡದ ಸೆಲೆಬ್ರಿಟಿ ಒಬ್ಬರು ನಮ್ಮ ದೇಶದ ಆಂತರಿಕ ವಿಚಾರದ ಬಗ್ಗೆ ಕಾಮೆಂಟ್ ಮಾಡಿರುವುದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ