ರೈತ ಚಳವಳಿಗೆ ವಿದೇಶಿಯರ ಟ್ವೀಟ್: ಒಗ್ಗಟ್ಟಾದ ಭಾರತದ ಕ್ರಿಕೆಟಿಗರು
ಗುರುವಾರ, 4 ಫೆಬ್ರವರಿ 2021 (10:05 IST)
ಮುಂಬೈ: ರೈತ ಚಳವಳಿ ಬಗ್ಗೆ ವಿದೇಶಿಯರು ಟ್ವೀಟ್ ಮಾಡುವ ಮೂಲಕ ಭಾರತದ ಆಂತರಿಕ ವಿಚಾರದಲ್ಲಿ ತಲೆ ಹಾಕಲು ಯತ್ನಿಸುತ್ತಿರುವುದರ ವಿರುದ್ಧ ಭಾರತೀಯ ಕ್ರಿಕೆಟಿಗರು ಒಗ್ಗಟ್ಟಾಗಿದ್ದಾರೆ.
ವಿದೇಶಿಯರ ಟ್ವೀಟ್ ವಿರುದ್ಧ ಒಂದಾದ ಟ್ವಿಟಿಗರು ಐಕ್ಯತೆಗಾಗಿಭಾರತ ಅಭಿಯಾನ ಮಾಡಿದ್ದರು. ಈ ಅಭಿಯಾನದಲ್ಲಿ ಸಚಿನ್ ತೆಂಡುಲ್ಕರ್, ವಿರಾಟ್ ಕೊಹ್ಲಿ, ರವಿಶಾಸ್ತ್ರಿ, ಅನಿಲ್ ಕುಂಬ್ಳೆ, ರೋಹಿತ್ ಶರ್ಮಾ, ಶಿಖರ್ ಧವನ್, ಅಜಿಂಕ್ಯಾ ರೆಹಾನೆ, ಗೌತಮ್ ಗಂಭೀರ್ ಭಾರತದ ವಿಚಾರದಲ್ಲಿ ವಿದೇಶಿಯರು ಮೂಗು ತೂರಿಸಬಾರದು ಎಂದು ಖಡಕ್ ಆಗಿ ಟ್ವೀಟ್ ಮಾಡಿ ವಿದೇಶೀ ಅಪಪ್ರಚಾರದ ವಿರುದ್ಧ ಧ್ವನಿ ಎತ್ತಿದ್ದಾರೆ.