ಅಪಘಾತವಾಗಿ 51 ಗಂಟೆಗಳ ಬಳಿಕ ಮೊದಲ ರೈಲು ಸಂಚಾರ

ಸೋಮವಾರ, 5 ಜೂನ್ 2023 (11:37 IST)
ಭುವನೇಶ್ವರ : ದೇಶದ ಇತಿಹಾಸದಲ್ಲೇ ಅತ್ಯಂತ ಭೀಕರ ಎನಿಸಿಕೊಂಡ ಬಾಲಸೋರ್ನಲ್ಲಿ ನಡೆದ ರೈಲುಗಳ ಅಪಘಾತವಾಗಿ ಇದೀಗ ಹಳಿಗಳನ್ನು ದುರಸ್ತಿ ಮಾಡಲಾಗಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
 
ಅಪಘಾತವಾಗಿ 51 ಗಂಟೆಗಳಲ್ಲಿ ಮೊದಲ ರೈಲು ಹಳಿಯಲ್ಲಿ ಸಂಚರಿಸಿದ್ದು, ಇದೀಗ ಕಾರ್ಯಾಚರಣೆ ಪುನರಾರಂಭವಾಗಿದೆ. ಒಡಿಶಾದ ಬಾಲಸೋರ್ನಲ್ಲಿ ನಡೆದ ತ್ರಿವಳಿ ರೈಲು ಅಪಘಾತದಲ್ಲಿ 275 ಜನರು ಸಾವನ್ನಪ್ಪಿದ್ದರು ಹಾಗೂ 1,100 ಕ್ಕೂ ಹೆಚ್ಚು ಜನರು ಗಾಯಗೊಂಡರು. ಘಟನೆ ಬಳಿಕ ದುರಸ್ತಿ ಮಾಡಲಾದ ಹಳಿಗಳ ಮೂಲಕ ಮೊದಲ ರೈಲು ಸಂಚರಿಸಿದ ಸಂದರ್ಭ ರೈಲ್ವೆ ಸಚಿವರು ಖುದ್ದಾಗಿ ಸ್ಥಳದಲ್ಲಿ ಹಾಜರಿದ್ದರು.

ಎರಡೂ ಹಳಿಗಳನ್ನು ದುರಸ್ತಿ ಮಾಡಲಾಗಿದೆ. 51 ಗಂಟೆಗಳಲ್ಲಿ ರೈಲುಗಳ ಸಂಚಾರವನ್ನು ಸಾಮಾನ್ಯಗೊಳಿಸಲಾಗಿದೆ. ಈಗಿನಿಂದ ರೈಲುಗಳ ಸಂಚಾರ ಮತ್ತೆ ಪ್ರಾರಂಭವಾಗುತ್ತದೆ. ಟ್ರ್ಯಾಕ್ ಲೈನ್ ಈಗ ರೈಲಿಗೆ ಸರಿಹೊಂದಿದೆ ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ