ನವದೆಹಲಿ : ನಾವು ಮೇಕ್ ಇನ್ ಇಂಡಿಯಾ ಮೇಲೆ ಗಮನ ಹರಿಸಬೇಕು. ನಮ್ಮಲ್ಲಿ ಸುಸ್ಥಿರ ಹಾಗೂ ಗುಣಾತ್ಮಕ ಉತ್ಪನ್ನ ತಯಾರಿಸುವ ಅಗತ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಪೋಸ್ಟ್ ಬಜೆಟ್ ಡಿಪಿಐಐಟಿ (ಕೈಗಾರಿಕೆ ಹಾಗೂ ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆ) ವೆಬಿನಾರ್ ಉದ್ದೇಶಿಸಿ ಮೇಕ್ ಇನ್ ಇಂಡಿಯಾ ಫಾರ್ ದ ವಲ್ರ್ಡ್ ಕುರಿತು ಮಾತನಾಡಿದ ಮೋದಿ, ಇಂದು ಜಗತ್ತು ಭಾರತವನ್ನು ಒಂದು ಉತ್ಪಾದನಾ ಶಕ್ತಿಯಾಗಿ ನೋಡುತ್ತಿದೆ ಎಂದು ಹೇಳಿದರು.
ಭಾರತದಲ್ಲಿ ತಯಾರಿಸಿದ ವಸ್ತುಗಳನ್ನು ಮಾರಾಟ ಮಾಡಬೇಕಾಗಿ ಬಂದಾಗ ಕೇವಲ ದೀಪಾವಳಿಯಂದು ಮಣ್ಣಿನ ದೀಪಗಳನ್ನು ಮಾರಾಟ ಮಾಡಿದರೆ ಸಾಕಾಗುವುದಿಲ್ಲ. ನಾವು ಇನ್ನೂ ದೊಡ್ಡದಾಗಿ ಯೋಚಿಸಬೇಕಿದೆ. ದೇಶೀಯ ತಯಾರಕರು ಜಾಗತಿಕ ಗುಣಮಟ್ಟವನ್ನು ಕಾಪಾಡಿಕೊಳ್ಳಬೇಕು.
ನಮ್ಮಲ್ಲಿ ಸಂಶೋಧನಾ ವಿಧಾನದ ಬಳಕೆಯ ಅಗತ್ಯವಿದೆ. ನಾವು ಎಲೆಕ್ಟ್ರಿಕ್ ವಾಹನ ಹಾಗೂ ವೈದ್ಯಕೀಯ ಉಪಕರಣಗಳಲ್ಲಿ ಮೇಕ್ ಇನ್ ಇಂಡಿಯಾವನ್ನು ಉತ್ತೆಜಿಸಬಹುದು ಎಂದು ಮೋದಿ ತಿಳಿಸಿದರು.