ಮಂತ್ರಾಲಯವನ್ನು ಕರ್ನಾಟಕಕ್ಕೆ ಸೇರಿಸುವಂತೆ ಆಗ್ರಹಿಸಿದ ತೆಲುಗುದೇಶಂ ಪಕ್ಷದ ಮಾಜಿ ಶಾಸಕ
ಗುರುವಾರ, 2 ಜನವರಿ 2020 (10:19 IST)
ಆಂಧ್ರಪ್ರದೇಶ: ಮಂತ್ರಾಲಯವನ್ನು ಕರ್ನಾಟಕಕ್ಕೆ ಸೇರಿಸುವಂತೆ ತೆಲುಗುದೇಶಂ ಪಕ್ಷದ ಮಾಜಿ ಶಾಸಕ ತಿಕ್ಕಾರೆಡ್ಡಿ ಆಗ್ರಹಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕರ್ನಾಟಕದ ಜತೆ ಮಂತ್ರಾಲಯ ಕ್ಷೇತ್ರ ವಿಲೀನಕ್ಕೆ ಪಟ್ಟುಹಿಡಿದಿದ್ದು, ಮಂತ್ರಾಲಯದಲ್ಲಿ ಕನ್ನಡಿಗರೇ ಹೆಚ್ಚಿನ ಸಂಖ್ಯೆಯಲ್ಲಿದ್ದೇವೆ. ಭಾಷೆ ವಿಚಾರಕ್ಕೆ ಬಂದರೆ ಬಳ್ಳಾರಿಗೆ ತೀರಾ ಹತ್ತಿರದಲ್ಲಿದ್ದೇವೆ. ನಮ್ಮನ್ನ ಕರ್ನಾಟಕಕ್ಕೆ ಸೇರಿಸಿ ಬಿಡಿ ಎಂದು ಅವರು ಒತ್ತಾಯಿಸಿದ್ದಾರೆ.