ನಾನು ಯುವಕನಾಗಿದ್ದಾಗ ಅದೊಂದು ಜನಪ್ರಿಯ ಅಶ್ಲೀಲ ಚಿತ್ರ ಬಿಡುಗಡೆಯಾಗಿತ್ತು. ನಾನು ಮತ್ತು ನನ್ನ ಸಹೋದರ ಚಿತ್ರ ವೀಕ್ಷಣೆಗಾಗಿ ತೆರಳಿದ್ದೇವು. ಇಂಟರ್‌ವೆಲ್ ಸಂದರ್ಭದಲ್ಲಿ ಥಿಯೇಟರ್‌ನಲ್ಲಿ ಲೈಟ್ ಆನ್ ಆದಾಗ ನನ್ನ ಪಕ್ಕದಲ್ಲಿಯೇ ನೆರೆಮನೆಯಾತ ಕುಳಿತಿರುವುದು ಕಂಡು ಬಂತು. ನೆರೆಮನೆಯಾತ ದಿನಾ ಸಂಜೆ ನಮ್ಮ ತಾಯಿಯೊಂದಿಗೆ ಹರಟೆ ಹೊಡೆಯುತ್ತಿದ್ದನು. ನಾವು ಸತ್ತೇವು ಎಂದು ಭಾವಿಸಿದೆ.
ನಾವು ಮನೆಗೆ ತಲುಪಿದಾಗ ನೆರೆಮನೆಯಾತ ಹೇಳುವ ಮೊದಲೇ ನಾನೇ ತಾಯಿಗೆ ಮಾಹಿತಿ ನೀಡಿದೆ. ನಾನು ಸಿನೆಮಾ ನೋಡಲು ಹೋಗಿದ್ದೆ. ಆದೊಂದು ಕೆಟ್ಟ ಸಿನೆಮಾ ಇದ್ದರಿಂದ ಮಧ್ಯದಲ್ಲಿಯೇ ಸಿನೆಮಾ ನೋಡುವುದು ಬಿಟ್ಟು ವಾಪಸ್ ಮನೆಗೆ ಬಂದಿದ್ದೇವೆ. ನಮ್ಮ ನೆರೆಮನೆಯಾತ ಕೂಡಾ ಟಾಕೀಜ್‌ನಲ್ಲಿದ್ದ ಎಂದು ಹೇಳಿದ್ದೆ. ತಾಯಿ ಮೌನವಹಿಸಿದ್ದರು ಎಂದು ಸಿಎಂ ಮನೋಹರ್ ಪರಿಕ್ಕರ್ ತಮ್ಮ ವಿದ್ಯಾರ್ಥಿ ಜೀವನವನ್ನು ಬಿಚ್ಚಿಟ್ಟಿದ್ದಾರೆ.