ಹಣ ಕೊಡದ ಅಜ್ಜಿಯ ಕುತ್ತಿಗೆ ಸೀಳಿ ಕೊಂದ ಮೊಮ್ಮಗ

ಮಂಗಳವಾರ, 12 ಜುಲೈ 2022 (11:02 IST)
ನವದೆಹಲಿ: ಹಣ ಕೊಡಲಿಲ್ಲವೆಂದು 84 ವರ್ಷದ ಅಜ್ಜಿಗೆ ಮೊಮ್ಮಗನೇ ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ದೆಹಲಿಯಲ್ಲಿ ನಡೆದಿದೆ.

ವೃದ್ಧೆ ಒಂಟಿಯಾಗಿ ವಾಸಿಸುತ್ತಿದ್ದಳು. ಇತ್ತೀಚೆಗಷ್ಟೇ ಮನೆ ಮಾರಿದ ಹಣ ಆಕೆಯ ಬಳಿಯಿತ್ತು. ಇದರ ಮೇಲೆ ಮೊಮ್ಮಗನ ಕಣ್ಣು ಬಿದ್ದಿತ್ತು. ಇದಕ್ಕಾಗಿಯೇ ಅಜ್ಜಿಯ ಬಳಿ ರಾತ್ರಿ ಹೊತ್ತು ಬಂದಿದ್ದ.

ಅಜ್ಜಿ ಹಣ ಕೊಡಲು ಒಪ್ಪದೇ ಇದ್ದಾಗ ಸರ್ಜಿಕಲ್ ಬ್ಲೇಡ್ ನಿಂದ ಕುತ್ತಿಗೆ ಸೀಳಿ ಕೊಲೆ ಮಾಡಿದ್ದಾನೆ. ಬಳಿಕ ತನ್ನ ನಾಲ್ವರು ಸ್ನೇಹಿತರನ್ನು ಕರೆದಿದ್ದಾನೆ. ಇದೀಗ ಪೊಲೀಸರು ನಾಲ್ವರು ಸ್ನೇಹಿತರನ್ನು ವಶಕ್ಕೆ ಪಡೆದಿದ್ದು, ಆರೋಪಿ ಮೊಮ್ಮಗನನ್ನು ಬಂಧಿಸಿದ್ದಾರೆ. ಸಿಸಿಟಿವಿ ದೃಶ‍್ಯಾವಳಿ ಆಧರಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ