ಆಸ್ಟ್ರೇಲಿಯಾ ಪ್ರಧಾನಿಯ ಶುಭಸಂದೇಶ

ಶುಕ್ರವಾರ, 18 ಮಾರ್ಚ್ 2022 (11:36 IST)
ಹೋಳಿಹಬ್ಬದ ಪ್ರಯುಕ್ತ ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಭಾರತೀಯರಿಗೆ ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಅವರೂ ಶುಭ ಹಾರೈಸಿದ್ದಾರೆ.

ಈ ಕುರಿತು ಅಧೀಕೃತ ಪ್ರಕಟಣೆ ಹೊರಡಿಸಿರುವ ಅವರು, `ನಾನು ಭಾರತೀಯ ಆಸ್ಟ್ರೇಲಿಯನ್ ಸಮುದಾಯಕ್ಕೆ ಧನ್ಯವಾದ ಹೇಳಲು ಬಯಸುತ್ತೇನೆ. ನಿಮ್ಮ ಸ್ವಂತ ಕುಟುಂಬಗಳಿಗೆ ಮಾತ್ರವಲ್ಲದೆ ಎಲ್ಲ ಆಸ್ಟ್ರೇಲಿಯನ್ನರಿಗೂ ನೀವು ಪ್ರೀತಿ ಮತ್ತು ಕಾಳಜಿಯನ್ನು ತೋರಿಸಿದ್ದೀರಿ.

ಅಲ್ಲದೆ, ಕೋವಿಡ್ ಕಾರಣದಿಂದ ಅಂತರ ಮೂಡಿದ್ದ ಸಮುದಾಯಗಳ ನಡುವೆ ಇಂತಹ ಆಚರಣೆಗಳು ಸ್ನೇಹ ಹಾಗೂ ಏಕತೆಯ ಉತ್ಸಾಹದಲ್ಲಿ ನಮ್ಮನ್ನು ಒಟ್ಟಿಗೇ ಸೇರಿಸುತ್ತವೆ, ಭವಿಷ್ಯದ ಭರವಸೆಗಳನ್ನೂ ಪ್ರೇರೇಪಿಸುತ್ತದೆ’ ಎಂದು ಸಂದೇಶ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ