ಆಸ್ಟ್ರೇಲಿಯಾ ಬಳಿಕ ಆಫ್ರಿಕಾ ಆಟಗಾರರೂ ಐಪಿಎಲ್ ಆರಂಭಿಕ ಪಂದ್ಯಗಳಿಗೆ ಗೈರು
ಇದೀಗ ದ.ಆಫ್ರಿಕಾದ ಕೆಲವು ಆಟಗಾರರೂ ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ. ಆಫ್ರಿಕಾ ಆಟಗಾರರು ಮಾರ್ಚ್ 18 ರಿಂದ ಬಾಂಗ್ಲಾದೇಶ ವಿರುದ್ಧ ಏಕದಿನ ಸರಣಿ ಆಡಲಿದ್ದಾರೆ. ಹೀಗಾಗಿ ಪ್ರಮುಖ ಆಟಗಾರರಾದ ಕಗಿಸೊ ರಬಡಾ, ಲುಂಗಿ ನಿಗಿಡಿ, ಕ್ವಿಂಟನ್ ಡಿ ಕಾಕ್, ಡೇವಿಡ್ ಮಿಲ್ಲರ್ ಮುಂತಾದವರು ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ. ಮಾರ್ಚ್ 23 ರಂದು ಬಾಂಗ್ಲಾ ಸರಣಿ ಮುಕ್ತಾಯವಾಗಲಿದೆ. ಹಾಗಿದ್ದರೂ ಭಾರತಕ್ಕೆ ಬಂದು ಈ ಎಲ್ಲಾ ಆಟಗಾರರು ಕಡ್ಡಾಯ ಮೂರು
ದಿನಗಳ ಕ್ವಾರಂಟೈನ್ ಗೊಳಗಾಗಬೇಕು. ಹೀಗಾಗಿ ಆರಂಭಿಕ ಪಂದ್ಯವನ್ನು ತಪ್ಪಿಸಿಕೊಳ್ಳುವ ಸಾಧ‍್ಯತೆ ಹೆಚ್ಚಳವಾಗಿದೆ.