ಮದುವೆ ತಪ್ಪಿಸಿಕೊಳ್ಳಲೆತ್ನಿಸಿದ ವರ: ಪೊಲೀಸರ ಸಮ್ಮುಖದಲ್ಲಿ ತಡರಾತ್ರಿ ನಡೆದ ಮದುವೆ
ಕಳೆದ ವರ್ಷ ಈ ಜೋಡಿಯ ವಿವಾಹ ನಡೆಯಬೇಕಿತ್ತು. ಆದರೆ ಮದುವೆ ದಿನ ವರ ನಾಪತ್ತೆಯಾಗಿದ್ದ. ಬಳಿಕ ವಧುವಿನ ಮನೆಯವರು ಪೊಲೀಸರ ಮೊರೆ ಹೋಗಿದ್ದರು. ಪೊಲೀಸರ ಮಧ್ಯಸ್ಥಿಕೆಯಲ್ಲಿ ಸಂಧಾನ ನಡೆದು ಮಾರ್ಚ್ 25 ರಂದು ಮದುವೆ ನಿಗದಿಯಾಗಿತ್ತು.
ಆದರೆ ಈ ಬಾರಿಯೂ ವರ ಮತ್ತೆ ನಾಪತ್ತೆಯಾಗಿದ್ದ. ಇದರಿಂದ ಬೇಸತ್ತ ವಧುವಿನ ಕುಟುಂಬ ಮತ್ತೆ ಪೊಲೀಸರ ಮೊರೆ ಹೋಗಿದೆ. ಪೊಲೀಸರು ವರನನ್ನು ಹುಡುಕಿ ತಂದು ತಮ್ಮ ಸಮ್ಮುಖದಲ್ಲೇ ರಾತ್ರೋ ರಾತ್ರಿ ಮದುವೆ ಮಾಡಿಸಿದ್ದಾರೆ.