ನಾಳೆ ರಾಜ್ಯಸಭೆಯಲ್ಲಿ ಜಿಎಸ್‌ಟಿ ಮಂಡನೆ

ಮಂಗಳವಾರ, 2 ಆಗಸ್ಟ್ 2016 (14:57 IST)
ಬಹು ನಿರೀಕ್ಷಿತ  ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಸೂದೆ ಬುಧವಾರ ರಾಜ್ಯಸಭೆಯಲ್ಲಿ ಮತ್ತೆ ಮಂಡನೆಯಾಗಲಿದೆ. ಮೂರು ದಿನಗಳ ಕಾಲ ಕಲಾಪದಲ್ಲಿ ಕಡ್ಡಾಯವಾಗಿ ಹಾಜರಿರುವಂತೆ ಬಿಜೆಪಿ ತನ್ನ 53 ರಾಜ್ಯಸಭಾ ಸಂಸದರಿಗೆ ವಿಪ್ ಜಾರಿ ಮಾಡಿದೆ.

ವಿಪಕ್ಷಗಳ ಬೇಡಿಕೆಯಂತೆ ಮಸೂದೆಯಲ್ಲಿ ಸರ್ಕಾರ ಕೆಲವು ತಿದ್ದುಪಡಿಗಳನ್ನು ತರುತ್ತಿದ್ದು ಕಾಂಗ್ರೆಸ್‌ ಮತ್ತು ಇತರ ಎಲ್ಲ ಪ್ರಮುಖ ವಿರೋಧ ಪಕ್ಷಗಳು ಬೆಂಬಲ ನೀಡುವ ಸುಳಿವು ನೀಡಿವೆ. ಹಾಗಾಗಿ ಈ ಬಾರಿ ರಾಜ್ಯಸಭೆಯಲ್ಲಿ ಜಿಎಸ್‌ಟಿ ಅಂಗೀಕಾರವಾಗುವುದು ಬಹುತೇಕ ಖಚಿತವಾಗಿದೆ.

‘ಜಿಎಸ್‌ಟಿ ಮಸೂದೆ ಅಂಗೀಕಾರಕ್ಕಾಗಿ ಕಲಾಪ ಪಟ್ಟಿಯಲ್ಲಿ ಸೇರಿಸಲಾಗಿದೆ. ಎಲ್ಲ ಪಕ್ಷಗಳ ಬೆಂಬಲ ಕೋರುತ್ತಿದ್ದೇವೆ. ಮಸೂದೆಯ ಪಾಸ್ ಆಗುವ ಸಾಧ್ಯತೆಗಳು ದಟ್ಟವಾಗಿವೆ’ ಎಂದು ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ್‌ ಭರವಸೆ ವ್ಯಕ್ತ ಪಡಿಸಿದ್ದಾರೆ.

ಈ ಮಸೂದೆ ಅಂಗೀಕಾರವಾದರೆ ದೇಶದಾದ್ಯಂತ ಒಂದೇ ಪರೋಕ್ಷ ತೆರಿಗೆ ಜಾರಿಗೆ ಬರುತ್ತದೆ.

ವೆಬ್ದುನಿಯಾವನ್ನು ಓದಿ