ಹರಿಯಾಣ ಹಿಂಸಾಚಾರ; ಸಾವಿನ ಸಂಖ್ಯೆ 6ಕ್ಕೆ ಏರಿಕೆ
ಕಳೆದ ಎರಡು ದಿನಗಳ ಹಿಂದೆ ಹರಿಯಾಣದ ನೂಹ್ನಲ್ಲಿ ಆರಂಭವಾದ ಹಿಂಸಾಚಾರವು ಇದೀಗ ಗುರುಗ್ರಾಮವನ್ನು ತಲುಪಿದೆ. ನಿನ್ನೆ ರಾತ್ರಿ ಅಲ್ಲಿಯ ಮಸೀದಿ ಮೇಲೆ ದಾಳಿ ನಡೆಸಿದ ಗುಂಪೊಂದು ಧರ್ಮಗುರುವನ್ನು ಹತ್ಯೆ ಮಾಡಿದೆ. ಅಷ್ಟೇ ಅಲ್ಲದೇ ಅಂಗಡಿಗಳಿಗೂ ಬೆಂಕಿ ಹಚ್ಚಿದೆ. ಹಿಂಸಾಚಾರದಲ್ಲಿ ಇಬ್ಬರು ಹೋಮ್ಗಾರ್ಡ್ಸ್ ಸೇರಿದಂತೆ 6 ಮಂದಿ ಸಾವನ್ನಪ್ಪಿದ್ದು, ನುಹ್ನಲ್ಲಿ ಕರ್ಫ್ಯೂ ವಿಧಿಸಲಾಗಿದೆ. ಹಿಂಸಾಚಾರವನ್ನು ನಿಯಂತ್ರಿಸಲು ಅರೆಸೇನಾ ಪಡೆಗಳ 20 ಮಂದಿಯನ್ನು ನಿಯೋಜಿಸಲಾಗಿದೆ. ಹಿಂಸಾಚಾರದ ವಿರುದ್ಧ ವಿಶ್ವ ಹಿಂದೂ ಪರಿಷತ್ ಇಂದು ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕರೆ ನೀಡಿದೆ. ಮತ್ತೊಂದೆಡೆ ಹರಿಯಾಣದಲ್ಲಿ ಹಿಂಸಾಚಾರದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ 11 ಜಿಲ್ಲೆಗಳಲ್ಲಿ ಹೈ ಅಲರ್ಟ್ ನೀಡಲಾಗಿದೆ. ರಾಜಸ್ಥಾನದ ಭರತ್ಪುರದ ನಂತರ ಅಲ್ವಾರ್ನಲ್ಲಿ ಸೆಕ್ಷನ್ 144ನ್ನ ಜಾರಿಗೊಳಿಸಲಾಗಿದೆ.