ದಾಖಲೆ ಇದ್ರೆ ಕೋರ್ಟ್ ಗೆ ಹೋಗಿ ಅಕ್ರಮ ಸಾಬೀತು ಪಡಿಸಿ: ಅಮಿತ್ ಷಾ ಸವಾಲು
ನವದೆಹಲಿ: ಅಕ್ರಮವೆಸಗಿರುವ ಬಗ್ಗೆ ನಿಮ್ಮ ಬಳಿ ದಾಖಲೆಯಿದ್ದರೆ ಕೋರ್ಟ್ ಗೆ ಹೋಗಿ ಆರೋಪ ಸಾಬೀತುಪಡಿಸಿ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಸವಾಲು ಹಾಕಿದ್ದಾರೆ.
ಜೈ ಷಾ ಮಾಲಿಕತ್ವದ ಸಂಸ್ಥೆ ಟೆಂಪಲ್ ಎಂಟರ್ ಪ್ರೈಸಸ್‌ನ ಆದಾಯ ಒಂದು ವರ್ಷದ ಅವಧಿಯಲ್ಲಿ 50 ಸಾವಿರದಿಂದ 80 ಕೋಟಿ ರೂ.ಗೆ ಏರಿಕೆಯಾಗಿದೆ ಎಂದು ‘ದಿ ವೈರ್’ ಸುದ್ದಿತಾಣ ವರದಿ ಮಾಡಿತ್ತು. ಈ ಸಂಬಂಧ ವೆಬ್ ಸೈಟ್ ವಿರುದ್ಧ ಜೈ ಷಾ ನೂರು ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.