ಮೆಕ್ಕಾದಲ್ಲಿ ಬಿಸಿಗಾಳಿ: ಮೃತ 562 ಹಜ್ ಯಾತ್ರಿಗಳಲ್ಲಿ 68 ಮಂದಿ ಭಾರತದವರು

Sampriya

ಗುರುವಾರ, 20 ಜೂನ್ 2024 (17:11 IST)
ಮೆಕ್ಕಾ: ಇಲ್ಲಿ ಬೀಸುತ್ತಿರುವ ಬಿಸಿಗಾಳಿ ಪರಿಣಾಮ ಈಗಾಗಲೇ ಮೃತರ ಸಂಖ್ಯೆ 562ಕ್ಕೆ ಏರಿಕೆಯಾಗಿದ್ದು, ಇದರಲ್ಲಿ 68 ಮಂದಿ ಭಾರತದ ಮುಸ್ಲಿಮರು ಎಂದು ತಿಳಿದುಬಂದಿದೆ.

ಈ ವಾರ ಸುಮಾರು 2 ಮಿಲಿಯನ್ ಮುಸ್ಲಿಮರು ಹಜ್ ಯಾತ್ರೆಯನ್ನು ಮುಕ್ತಾಯಗೊಳಿಸಿದ್ದು, ಆದರೆ ಅಲ್ಲಿರುವ ತೀವ್ರವಾದ ಶಾಖ ನೂರಾರು ಜನರ ಪ್ರಾಣಕ್ಕೆ ಕುತ್ತು ತಂದಿದೆ.  

ಸುಡುವ ಶಾಖದ ನಡುವೆ ಮೆಕ್ಕಾಗೆ ವಾರ್ಷಿಕ ಮುಸ್ಲಿಂ ತೀರ್ಥಯಾತ್ರೆಯ ಸಮಯದಲ್ಲಿ ಸಾವನ್ನಪ್ಪಿದವರಲ್ಲಿ ಸುಮಾರು 68 ಭಾರತೀಯರು ಸೇರಿದ್ದಾರೆ ಎಂದು ರಾಜತಾಂತ್ರಿಕರೊಬ್ಬರು ತಿಳಿಸಿದ್ದಾರೆ.

ಮಂಗಳವಾರ, ಹಜ್ ಯಾತ್ರೆಯಲ್ಲಿ ಕನಿಷ್ಠ 550 ಜನರು ಸಾವನ್ನಪ್ಪಿದ್ದಾರೆ ಎಂದು ಎಎಫ್‌್ಪಿ ವರದಿ ಮಾಡಿದೆ. ಆ ಪೈಕಿ 323 ಮಂದಿ ಈಜಿಪ್ಟಿನವರು ಶಾಖ ಸಂಬಂಧಿ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ ಎಂದು ಇಬ್ಬರು ಅರಬ್ ರಾಜತಾಂತ್ರಿಕರನ್ನು ಉಲ್ಲೇಖಿಸಿ ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಸೌದಿ ಮಾಧ್ಯಮ ವರದಿಗಳ ಪ್ರಕಾರ, ಸೋಮವಾರ ಮೆಕ್ಕಾದ ಗ್ರ್ಯಾಂಡ್ ಮಸೀದಿಯ ನೆರಳಿನಲ್ಲಿ ತಾಪಮಾನವು 51.8 ಡಿಗ್ರಿ ಸೆಲ್ಸಿಯಸ್‌ಗೆ ಏರಿದೆ. ಸಾವಿನ ವರದಿಗಳನ್ನು ನೀಡುವ ಮೊದಲು, ಹೆಚ್ಚಿನ ತಾಪಮಾನದ ನಡುವೆ ಮುಸ್ಲಿಂ ಯಾತ್ರಿಕರಲ್ಲಿ ಯಾವುದೇ ಅಸಾಮಾನ್ಯ ಸಾವುನೋವುಗಳನ್ನು ಅಧಿಕಾರಿಗಳು ಗಮನಿಸಿರಲಿಲ್ಲ ಎಂದು ಸೌದಿ ಆರೋಗ್ಯ ಅಧಿಕಾರಿಯೊಬ್ಬರು ರಾಯಿಟರ್ಸ್ಗೆ ತಿಳಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ