ಮಮತಾ ಆಡಳಿತದಲ್ಲಿ ಭಯೋತ್ಪಾದಕರಿಗೆ ಸ್ವರ್ಗ ಹೇಳಿಕೆ: ಬಿಜೆಪಿ ವಿರುದ್ಧ ಬಂಗಾಳ ದೀದಿ ವಾಗ್ದಾಳಿ

Sampriya

ಶುಕ್ರವಾರ, 12 ಏಪ್ರಿಲ್ 2024 (16:46 IST)
ಬೆಂಗಳೂರು: ಬಂಗಾಳ ಅಸುರಕ್ಷಿತ ಎಂಬ ಬಿಜೆಪಿ ಹೇಳಿಕೆಗಳನ್ನು ಉಲ್ಲೇಖಿಸಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ದೆಹಲಿ, ಉತ್ತರ ಪ್ರದೇಶ, ರಾಜಸ್ಥಾನ, ಗುಜರಾತ್ ಮತ್ತು ಬಿಹಾರ ಸುರಕ್ಷಿತವಾಗಿದೆಯೇ ಎಂದು ಗುಡುಗಿದ್ದಾರೆ.

 ರಾಮೇಶ್ವರಂ ಕೆಫೆ ಪ್ರಕರಣದ ಪ್ರಮುಖ ಆರೋಪಿಗಳನ್ನು ಕೋಲ್ಕತ್ತಾದಲ್ಲಿ ಬಂಧಿಸಿದ  ಬಂಧನದ ಬೆನ್ನಲ್ಲೇ  ಬಿಜೆಪಿಯ ಬಂಗಾಳದ ಸಹ-ಪ್ರಭಾರಿ ಅಮಿತ್ ಮಾಳವಿಯಾ  ಅವರು ಎಕ್ಸ್‌ ಖಾತೆಯಲ್ಲಿ ಬರೆದು, ಮಮತಾ ಬ್ಯಾನರ್ಜಿ ಸರ್ಕಾರದಲ್ಲಿ ಭಯೋತ್ಪಾದಕರಿಗೆ ಸ್ವರ್ಗವಾಗಿದೆ  ಎಂದು ಹೇಳಿದ್ದರು.

ಬೆಂಗಳೂರು ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿದ ನಂತರ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಶುಕ್ರವಾರ ಬಿಜೆಪಿ ವಿರುದ್ಧ ಗುಡುಗಿದರು.

ಬೆಂಗಳೂರಿನಲ್ಲಿ ಸ್ಫೋಟ ಸಂಭವಿಸಿದೆ. ಆರೋಪಿಗಳು ಕೂಡ ಕರ್ನಾಟಕದವರು. ಅವರು ಬಂಗಾಳದವರಲ್ಲ. ಇನ್ನೂ ಆರೋಪಿಗಳನ್ನು ಎರಡು ಗಂಟೆಗಳಲ್ಲಿ ಪೊಲೀಸರು ಬಂಧಿಸಿದ್ದು, ಇದೊಂದು ಬಿಜೆಪಿಯ ಪ್ರಚಾರದ ಗಿಮಿಕ್ ಎಂದು  ಬ್ಯಾನರ್ಜಿ ಕೂಚ್ ಬಿಹಾರ್‌ನಲ್ಲಿ ಚುನಾವಣಾ ರ್ಯಾಲಿಯಲ್ಲಿ ಹೇಳಿದರು.

ಬಂಗಾಳ ಅಸುರಕ್ಷಿತವಾಗಿದೆ ಎಂಬ ಹೇಳಿಕೆಗಳನ್ನು ಉಲ್ಲೇಖಿಸಿದ ಅವರು ದೆಹಲಿ, ಉತ್ತರ ಪ್ರದೇಶ, ರಾಜಸ್ಥಾನ, ಗುಜರಾತ್ ಮತ್ತು ಬಿಹಾರ ಸುರಕ್ಷಿತವಾಗಿದೆಯೇ ಎಂದು ಪ್ರಶ್ನಿಸಿದರು.

ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಇಬ್ಬರು ಶಂಕಿತರನ್ನು ಬಂಧಿಸಿದ ನಂತರ ಬಿಜೆಪಿ ಬ್ಯಾನರ್ಜಿ ಸರ್ಕಾರದ ಮೇಲೆ ದಾಳಿ ನಡೆಸಿತು.

ರಾಮೇಶ್ವರಂ ಕೆಫೆ ಸ್ಫೋಟದ ಇಬ್ಬರು ಪ್ರಮುಖ ಶಂಕಿತ ಆರೋಪಿಗಳಾದ ಬಾಂಬರ್ ಮುಸ್ಸಾವಿರ್ ಹುಸೇನ್ ಶಾಜಿಬ್ ಮತ್ತು ಸಹಚರ ಅಬ್ದುಲ್ ಮಥೀನ್ ಅಹ್ಮದ್ ತಾಹಾ ಅವರನ್ನು ಕೋಲ್ಕತ್ತಾದಿಂದ ಎನ್‌ಐಎ ಬಂಧಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ