ಹಿಜಬ್ ನಿಷೇಧ : ಶಾಲೆ ಬಿಡಿಸಿದ ಪೋಷಕರು!

ಮಂಗಳವಾರ, 27 ಸೆಪ್ಟಂಬರ್ 2022 (12:11 IST)
ತಿರುವನಂತರಪುರಂ : ಕೇರಳದ ಕೋಝಿಕೋಡ್ನಲ್ಲಿ 11ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಹಿಜಬ್ ಧರಿಸಿದ್ದಕ್ಕಾಗಿ ಶಾಲಾ ಆಡಳಿತ ಮಂಡಳಿ ಪ್ರವೇಶ ನಿರಾಕರಿದೆ.

ಇದರಿಂದ ರೊಚ್ಚಿಗೆದ್ದ ವಿದ್ಯಾರ್ಥಿನಿ ಕುಟುಂಬಸ್ಥರು ಮುಸ್ಲಿಂ ಸಂಘಟನೆಗಳ ವ್ಯಾಪಕ ಪ್ರತಿಭಟನೆಯ ನಂತರ ವಿದ್ಯಾರ್ಥಿನಿಯನ್ನು ಶಾಲೆಯಿಂದಲೇ ಬಿಡಿಸಿದ್ದಾರೆ.

ಕೋಝಿಕೋಡ್ನಲ್ಲಿರುವ ಪ್ರಾವಿಡೆನ್ಸ್ ಗರ್ಲ್ಸ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ವಿದ್ಯಾರ್ಥಿನಿಗೆ ಪ್ರವೇಶ ನಿರಾಕರಿಸಿದ್ದರಿಂದ ಇಸ್ಲಾಮಿಕ್ ಆರ್ಗನೈಜೇಷನ್ಸ್ ಅಫ್ ಇಂಡಿಯಾ ಹಾಗೂ ಮುಸ್ಲಿಂ ಸ್ಟೂಡೆಂಟ್ಸ್ ಫೆಡರೇಷನ್ ಸಂಘಟನೆಗಳು ವ್ಯಾಪಕ ಪ್ರತಿಭಟನೆ ನಡೆಸಿವೆ.

ಈ ವಿಷಯವನ್ನು ಶಾಲಾ ಆಡಳಿತಾಧಿಕಾರಿಗಳು ವಿದ್ಯಾರ್ಥಿನಿ ಪೋಷಕರಿಗೆ ತಿಳಿಸಿದ್ದಾರೆ. ಈ ವೇಳೆ ಮಧ್ಯ ಪ್ರವೇಶಿಸಿದ ಕುಟುಂಬಸ್ಥರು ಸಂವಿಧಾನ ವಿರೋಧಿ ಹೆಜ್ಜೆ ಇಟ್ಟಿರುವ ಶಾಲೆಯಲ್ಲಿ ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸವೇ ಬೇಡವೆಂದು ಶಾಲೆಯನ್ನೇ ಬಿಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ