ಹಿಂದೂ ಪದ್ದತಿಯಲ್ಲಿ ಸಪ್ತಪದಿ ಇಲ್ಲದೇ ಮದುವೆಗೆ ಮಾನ್ಯತೇ ಇಲ್ಲ: ಹೈಕೋರ್ಟ್ ತೀರ್ಪು
ಆದರೆ ಅಲಹಾಬಾದ್ ನ ಹೈಕೋರ್ಟ್ ತಾಳಿ ಕಟ್ಟಿದರೆ ಮಾತ್ರ ಮದುವೆಯಲ್ಲ, ಸಪ್ತಪದಿ ಹೆಜ್ಜೆ ಹಾಕದೇ ಮದುವೆಗೆ ಮಾನ್ಯತೆಯೇ ಇಲ್ಲ ಎಂದು ತೀರ್ಪು ನೀಡಿದೆ.
ವಾರಣಾಸಿಯ ಸ್ಮೃತಿ ಸಿಂಗ್ ಅಲಿಯಾಸ್ ಮೌಶುಮಿ ಸಿಂಗ್ ಅವರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಂಜಯ್ ಕುಮಾರ್ ಸಿಂಗ್ ನೇತೃತ್ವದ ಏಕಸದಸ್ಯ ಪೀಠ ಇಂತಹದ್ದೊಂದು ಮಹತ್ವದ ತೀರ್ಪು ನೀಡಿದೆ. ಕಾನೂನಿನ ದೃಷ್ಟಿಯಲ್ಲಿ ಮದುವೆಗೆ ಮಾನ್ಯತೆ ಬರಬೇಕೆಂದರೆ ಸಪ್ತಪದಿ ಶಾಸ್ತ್ರ ಮಾಡಲೇಬೇಕು ಎಂದು ಕೋರ್ಟ್ ತೀರ್ಪು ನೀಡಿದೆ.