ಉಗ್ರರ ಹತ್ಯೆಗೆ ಲಿಸ್ಟ್ ರೆಡಿ ಮಾಡಿಸಿದ ನೂತನ ಗೃಹ ಸಚಿವ ಅಮಿತ್ ಶಾ
ಕೇಂದ್ರ ಸಿದ್ಧಪಡಿಸಿರುವ ಉಗ್ರರ ಲಿಸ್ಟ್ ನಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ರಿಯಾಜ್ ನೈಕೊ, ಅಶ್ರಫ್ ಮೌಲ್ವಿ, ಲಷ್ಕರ್ ಎ ತೊಯ್ಬಾ, ಜೈಶ್ ಎ ಮೊಹಮ್ಮದ್ ಉಗ್ರ ಸಂಘಟನೆಯ ಪ್ರಮುಖ ಉಗ್ರರೂ ಸೇರಿದ್ದಾರೆ.
ಈ ಉಗ್ರರ ಬೇಟೆಗೆ ಸದ್ದಿಲ್ಲದೇ ವೇದಿಕೆ ಸಜ್ಜಾಗಿದೆ. ಈ ನಡುವೆ ಕಾಶ್ಮೀರದ ಭದ್ರತಾ ಪರಿಸ್ಥಿತಿಗಳ ಕುರಿತು ಅಮಿತ್ ಶಾ ವಿವರಣೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಖುದ್ದಾಗಿ ತಾವೇ ಉಗ್ರರ ದಮನಕ್ಕೆ ಕಾರ್ಯನೀತಿ ರೂಪಿಸಲು ಗೃಹ ಸಚಿವರು ಮುಂದಾಗಿದ್ದಾರೆ.