ಅಟಲ್ ಪೆನ್ಷನ್ ಯೋಜನೆಗೆ ಯಾರು ಅರ್ಹರು ಮತ್ತು ಅರ್ಜಿ ಸಲ್ಲಿಸುವುದು ಹೇಗೆ

Krishnaveni K

ಮಂಗಳವಾರ, 6 ಆಗಸ್ಟ್ 2024 (08:59 IST)
ಬೆಂಗಳೂರು: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಜನಪ್ರಿಯ ಯೋಜನೆಗಳಲ್ಲಿ ಅಟಲ್ ಪೆನ್ಷನ್ ಯೋಜನೆಯೂ ಒಂದಾಗಿದೆ. ಇದಕ್ಕೆ ಅರ್ಜಿ ಸಲ್ಲಿಸುವುದು ಹೇಗೆ, ಯಾರು ಅರ್ಜಿ ಸಲ್ಲಿಸಬಹುದು ಎಂಬಿತ್ಯಾದಿ ವಿವರಳಗನ್ನು ಇಲ್ಲಿ ನೀಡಲಾಗಿದೆ.

ಅಟಲ್ ಪೆನ್ಷನ್ ಯೋಜನೆ (ಎಪಿವೈ) ಎಂದರೇನು
ಭಾರತದ ಎಲ್ಲಾ ನಾಗರಿಕರಿಗೆ ಸಾಮಾಜಿಕ ಮತ್ತು ಆರ್ಥಿಕ ಭದ್ರತೆ ಒದಗಿಸುವ ನಿಟ್ಟಿನಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಯೋಜನೆಯಾಗಿದೆ. ವಿಶೇಷವಾಗಿ ಆರ್ಥಿಕವಾಗಿ ಹಿಂದುಳಿದವರು, ಬಡವರು, ಶ್ರಮಿಕ ವರ್ಗದವರು ಇದರ ಪ್ರಯೋಜನ ಪಡೆಯಬಹುದಾಗಿದೆ.  ವೃದ್ಧಾಪ್ಯದಲ್ಲಿ ಆರ್ಥಿಕವಾಗಿ ಇನ್ನೊಬ್ಬರ ಮೇಲೆ ಅವಲಂಬಿತವಾಗಬಾರದು ಎಂಬ ಕಾರಣಕ್ಕೆ ಯೋಜನೆ ಜಾರಿಗೆ ತರಲಾಯಿತು. ಇದಕ್ಕೆ ನಿಮ್ಮ ಹೆಸರಿನಲ್ಲಿ ಬ್ಯಾಂಕ್ ಖಾತೆ ಇರಬೇಕು ಮತ್ತು ಆ ಬ್ಯಾಂಕ್ ಖಾತೆಯಿಂದ ಪಿಂಚಣಿ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಯಾರು ಅರ್ಜಿ ಸಲ್ಲಿಸಬಹುದು?
ಪಿಂಚಣಿ ಅಥವಾ ನಿವೃತ್ತಿ ವೇತನ ಒದಗಿಸದ ಕಂಪನಿಗಳಲ್ಲಿ ಕೆಲಸ ಮಾಡುವವರು 18 ರಿಂದ 40 ವರ್ಷದೊಳಗಿನವರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಉಳಿದಂತೆ ಯಾವೆಲ್ಲಾ ಅರ್ಹತೆಗಳು ಬೇಕು ಇಲ್ಲಿದೆ ನೋಡಿ:
ಭಾರತೀಯ ನಾಗರಿಕರಾಗಿರಬೇಕು
ಕನಿಷ್ಠ 20 ವರ್ಷಗಳವರೆಗೆ ಸೇವೆ ಸಲ್ಲಿಸಬೇಕು
ನಿಮ್ಮ ಆಧಾರ್ ನೊಂದಿಗೆ ಲಿಂಕ್ ಮಾಡಲಾದ ಬ್ಯಾಂಕ್ ಖಾತೆ ಬೇಕು
ಮಾನ್ಯವಾದ ಮೊಬೈಲ್ ಸಂಖ್ಯೆ ಬೇಕು.

ಅಟಲ್ ಪಿಂಚಣಿಗೆ ಅರ್ಜಿ ಸಲ್ಲಿಸುವುದು ಹೇಗೆ?
ನೆಟ್ ಬ್ಯಾಂಕಿಂಗ್ ಸೌಲಭ್ಯವಿದ್ದರೆ ಆನ್ ಲೈನ್ ನಲ್ಲಿ ಅಟಲ್ ಪಿಂಚಣಿ ಖಾತೆ ತೆರೆಯಬಹುದು
ನೆಟ್ ಬ್ಯಾಂಕಿಂಗ್ ಮೂಲಕ ಸ್ವಯಂ ಡೆಬಿಟ್ ಸೌಲಭ್ಯ ಪಡೆಯಬಹುದು
ಯೋಜನೆಗೆ ಹಣ ಪಾವತಿ ಮಾಡಲು ನಿಮ್ಮ ಬ್ಯಾಂಕ್ ಖಾತೆಯಲ್ಲಿ ಸಾಕಷ್ಟು ಮೊತ್ತವಿದೆ ಎಂಬುದು ಖಚಿತವಾಗಿರಬೇಕು.
ನೆಟ್ ಬ್ಯಾಂಕಿಂಗ್ ಮೂಲಕ ಈ ಸೌಲಭ್ಯವಿದೆಯೇ ಎಂದು ನಿಮ್ಮ ಬ್ಯಾಂಕ್ ಮುಖಾಂತರ ವಿಚಾರಿಸಿಕೊಳ್ಳಬೇಕು.
ಆಫ್ ಲೈನ್ ನಲ್ಲಿ ಈ ಯೋಜನೆ ಮಾಡುವುದಿದ್ದರೆ ನಿಮ್ಮ ಬ್ಯಾಂಕ್ ಖಾತೆಯಿರುವ ಶಾಖೆಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು. ಬ್ಯಾಂಕ್ ನಲ್ಲಿ ನೀಡುವ ಅರ್ಜಿ ಭರ್ತಿ ಮಾಡಿ ಆಧಾರ್ ಕಾರ್ಡ್ ಕಾಪಿಯೊಂದಿಗೆ ನೀಡಿದರೆ ಅವರು ಅದಕ್ಕೆ ರಸೀದಿ ನೀಡುತ್ತಾರೆ.

ಎಷ್ಟು ಪಿಂಚಣಿ ಸಿಗುತ್ತದೆ
ನೀವು ಎಷ್ಟು ಪ್ರೀಮಿಯಂ ಕಟ್ಟುತ್ತೀರಿ ಎಂದು ಆಯ್ಕೆ ಮಾಡುತ್ತೀರೋ ಅದಕ್ಕೆ ತಕ್ಕಂತೆ 60 ವರ್ಷ ದಾಟಿದ ಮೇಲೆ 1000 ರೂ., 2000 ರೂ., 3000 ರೂ. 4000, ಅಥವಾ 5000 ರೂ. ಪಿಂಚಣಿ ಪಡೆಯುವ ಅವಕಾಶವಿರುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ