ಇದೀಗ ಮೋದಿ ಸರ್ಕಾರ ಮೂರನೇ ಅವಧಿ ಆರಂಭವಾಗಿದ್ದು, ಈ ಬಾರಿ ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಡಿಯಲ್ಲಿ ನೀಡಲಾಗುತ್ತಿರುವ ಹಣ ಹೆಚ್ಚಳ ಮಾಡುವ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ. ಈಗ ನೀಡಲಾಗುತ್ತಿರುವ 6000 ರೂ. ಬದಲಾಗಿ 2 ಸಾವಿರ ರೂ ಹೆಚ್ಚಳ ಮಾಡಿ 8000 ರೂ. ನೀಡುವ ಸಾಧ್ಯತೆಯಿದೆ. ಇದನ್ನು ಈ ಬಜೆಟ್ ನಲ್ಲಿ ಘೋಷಣೆ ಮಾಡಬಹುದು ಎಂಬ ನಿರೀಕ್ಷೆಯಿದೆ.
ಅನೇಕ ಕೃಷಿ ತಜ್ಞರು ಕೇಂದ್ರ ಸರ್ಕಾರಕ್ಕೆ ಈ ಬಗ್ಗೆ ಸಲಹೆ ನೀಡಿದ್ದಾರೆ .ಹೀಗಾಗಿ ತಜ್ಞರ ಸಲಹೆಯನ್ನು ಕೇಂದ್ರ ಪರಿಗಣಿಸುವ ಸಾಧ್ಯತೆಯಿದೆ. ಒಟ್ಟು ಮೂರು ಕಂತುಗಳಲ್ಲಿ ಕೇಂದ್ರ ಸರ್ಕಾರ ತಲಾ 2 ಸಾವಿರ ರೂ.ಗಳಂತೆ ರೈತರ ಖಾತೆಗಳಿಗೆ ನೇರವಾಗಿ ವರ್ಗಾವಣೆ ಮಾಡುತ್ತಿದ್ದಾರೆ. ಇನ್ನೀಗ ಈ ಹಣ ಏರಿಕೆಯಾಗುವ ನಿರೀಕ್ಷೆ ರೈತರದ್ದು. ಕಳೆದ ಮಧ್ಯಂತರ ಬಜೆಟ್ ನಲ್ಲೂ ಕೇಂದ್ರ ಹೆಚ್ಚಿನ ಕೊಡುಗೆ ನೀಡಿರಲಿಲ್ಲ. ಹೀಗಾಗಿ ಈ ಬಾರಿ ಬಂಪರ್ ಕೊಡುಗೆ ನಿರೀಕ್ಷಿಸಲಾಗಿದೆ.