ವಯನಾಡ್: ಎಲ್ಲ ಧರ್ಮಗಳ ಪ್ರಾರ್ಥನೆಯಿಂದ ಅಪರಿಚಿತ ಶವಗಳ ಸಾಮೂಹಿಕ ಅಂತ್ಯಸಂಸ್ಕಾರ

Sampriya

ಸೋಮವಾರ, 5 ಆಗಸ್ಟ್ 2024 (19:10 IST)
Photo Courtesy X
ವಯನಾಡ್: ವಯನಾಡಿನ ನಡೆದ ಭೀಕರ ಭೂಕುಸಿತದ ಪತ್ತೆ ಹಚ್ಚಲಾಗದ ಮೃತದೇಹಗಳ ಭಾಗಗಳನ್ನು ಸಾಮೂಹಿಕವಾಗಿ ಅಂತ್ಯಕ್ರಿಯೆಯನ್ನು ಇಂದು ಜಿಲ್ಲಾಡಳಿತವು ನಡೆಸಿತು. ಅಪರಿಚಿತ ಸಂತ್ರಸ್ತರ ದೇಹದ ಭಾಗಗಳನ್ನು ಪುತ್ತುಮಲ ಪ್ರದೇಶದಲ್ಲಿ ಹೂಳಲಾಯಿತು.

ಸಮಾಧಿ ಕಾರ್ಯಕ್ರಮಕ್ಕೂ ಮುನ್ನ ಎಲ್ಲ ಧರ್ಮದವರ ಪ್ರಾರ್ಥನೆ ನಡೆಸಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

ನಾಪತ್ತೆಯಾದ ದೇಹಗಳು ಮತ್ತು ಭೂಕುಸಿತ ದಲ್ಲಿ ಪತ್ತೆಯಾದ ದೇಹದ ಭಾಗಗಳ ಕುರಿತು ಎಎನ್‌ಐ ಜೊತೆ ಮಾತನಾಡಿದ ಕೇರಳ ಸಚಿವ ಕೆ ಎನ್ ಬಾಲಗೋಪಾಲ್, "ನಾಪತ್ತೆಯಾದ ದೇಹದ ಭಾಗಗಳ
ನಿಖರವಾದ ಸಂಖ್ಯೆಯನ್ನು ನಾವು ನೀಡಲು ಸಾಧ್ಯವಿಲ್ಲ. ಅಪರಿಚಿತ ಶವಗಳಿಗೆ ಸಾಮೂಹಿಕ ಅಂತ್ಯಕ್ರಿಯೆ ನಡೆಯುತ್ತಿದೆ" ಎಂದು ಹೇಳಿದರು.

ಕೇರಳದ ವಯನಾಡಿನ ಭೂಕುಸಿತ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆ ಸೋಮವಾರ ಸತತ ಏಳನೇ ದಿನಕ್ಕೆ ಕಾಲಿಟ್ಟಿದೆ.

ರಾಜ್ಯ ಆರೋಗ್ಯ ಸಚಿವಾಲಯದ ಪ್ರಕಾರ, ಆಗಸ್ಟ್ 2 ರ ಹೊತ್ತಿಗೆ ಸಾವಿನ ಸಂಖ್ಯೆ 308 ಆಗಿದೆ.
220 ಮೃತದೇಹಗಳು ಪತ್ತೆಯಾಗಿದ್ದು, ಭಾನುವಾರದವರೆಗೆ 180 ಮಂದಿ ನಾಪತ್ತೆಯಾಗಿದ್ದಾರೆ.

ಪರಿಹಾರ ಕಾರ್ಯಾಚರಣೆಯ ಭಾಗವಾಗಿ ವಯನಾಡಿನಲ್ಲಿ ಒಟ್ಟು 53 ಶಿಬಿರಗಳನ್ನು ಸ್ಥಾಪಿಸಲಾಗಿದೆ. ಇತ್ತೀಚಿನ ನವೀಕರಣದ ಪ್ರಕಾರ, ಜಿಲ್ಲೆಯಾದ್ಯಂತ 1983 ಕುಟುಂಬಗಳು, 2501 ಪುರುಷರು, 2677 ಮಹಿಳೆಯರು, 1581 ಮಕ್ಕಳು ಮತ್ತು 20 ಗರ್ಭಿಣಿಯರು ಸೇರಿದಂತೆ 6759 ಜನರನ್ನು ಈ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ