ನಾನೇ ಮಗಳೇ ಮೇಲೆ ಗುಂಡು ಹಾರಿಸಿದೆ, ಪೊಲೀಸರು ಮುಂದೆ ತಪ್ಪೊಪ್ಪಿಕೊಂಡ ರಾಧಿಕಾ ಯಾದವ್ ತಂದೆ

Sampriya

ಶುಕ್ರವಾರ, 11 ಜುಲೈ 2025 (16:56 IST)
Photo Credit X
ಗುರುಗ್ರಾಮ್ (ಹರಿಯಾಣ): ಟೆನಿಸ್ ತರಬೇತುದಾರ ಮತ್ತು ರಾಷ್ಟ್ರೀಯ ಮಟ್ಟದ ಆಟಗಾರ್ತಿಯಾಗಿದ್ದ ರಾಧಿಕಾ ಯಾದವ್ ಹತ್ಯೆ ಪ್ರಕರಣ ಸಂಬಂಧ  ಗುರುಗ್ರಾಮ್ ಪೊಲೀಸರು ಪ್ರಮುಖ ಆರೋಪಿ ದೀಪಕ್ ಯಾದವ್‌ನನ್ನು ನಗರದ ನ್ಯಾಯಾಲಯಕ್ಕೆ ಕರೆದೊಯ್ದಿದ್ದಾರೆ.

ಗುರುಗ್ರಾಮ್‌ನ ಸೆಕ್ಟರ್ 57 ರಲ್ಲಿ 25 ವರ್ಷದ ರಾಧಿಕಾ ಯಾದವ್ ತನ್ನ ಟೆನಿಸ್ ಅಕಾಡೆಮಿಗೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯದ ಮೇಲೆ ಆಕೆಯ ತಂದೆ ಗುಂಡಿಕ್ಕಿ ಕೊಂದಿದ್ದಾನೆ.

ಗುರುಗ್ರಾಮ್ ಪೊಲೀಸ್ ಪಿಆರ್‌ಒ ಸಂದೀಪ್ ಕುಮಾರ್, "ಮಾಹಿತಿ ಪಡೆದ ಪೊಲೀಸರು ಆಸ್ಪತ್ರೆಗೆ ತಲುಪಿದರು ಮತ್ತು ಇದು ಸೆಕ್ಟರ್ 57 ರ ನಿವಾಸಿ ರಾಧಿಕಾ ಎಂಬ 25 ವರ್ಷದ ಯುವತಿ ಎಂದು ಕಂಡುಹಿಡಿದಿದೆ. ನಂತರ ಪೊಲೀಸರು ಆಕೆಯ ಮನೆಗೆ ತಲುಪಿದಾಗ ಮೃತಪಟ್ಟ ರಾಧಿಕಾ ಯಾದವ್‌  ಟೆನಿಸ್ ಆಟಗಾರ್ತಿ ಮತ್ತು ಟೆನಿಸ್ ಅಕಾಡೆಮಿಯನ್ನು ನಡೆಸುತ್ತಿದ್ದಳು" ಎಂದು ತಿಳಿದುಬಂದಿದೆ. 

ಅಚ್ಚರಿ ಏನೆಂದರೆ ಆಕೆಯ ತಂದೆಯೇ ಮೂರು ಭಾರೀ ಗುಂಡು ಹಾರಿಸಿ ಕೊಲೆ ಮಾಡಿದ್ದಾರೆ. ಅವರನ್ನು ಪೊಲೀಸರು ಬಂಧಿಸಿದ್ದಾರೆ ಮತ್ತು ವಿಚಾರಣೆ ನಡೆಸಿದಾಗ ಅವರು ಅಪರಾಧವನ್ನು ಒಪ್ಪಿಕೊಂಡಿದ್ದಾರೆ. 

ಆರೋಪಿ ದೀಪಕ್ ಸುಮಾರು 49 ವರ್ಷ ವಯಸ್ಸಿನವನಾಗಿದ್ದಾನೆ, ಪ್ರಾಥಮಿಕ ತನಿಖೆಯಲ್ಲಿ, ಮೃತರು ಟೆನಿಸ್ ಅಕಾಡೆಮಿಯನ್ನು ನಡೆಸುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಲ್ಲಿ ಕಂಡುಬಂದಿದೆ, ಇದರಿಂದಾಗಿ ಆಕೆಯ ತಂದೆಯು ಗುಂಡು ಹಾರಿಸಿದ್ದಾನೆ. ಅಪರಾಧ ಎಸಗಲು ಬಳಸಿದ ಪರವಾನಿಗೆ ಪಡೆದಿರುವ ಆಯುಧವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಗುರುವಾರ ಮಾಹಿತಿ ನೀಡಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ