ನಾನು ಭಾರತದಲ್ಲಿ ಇರಲು ಬಯಸುತ್ತೇನೆ : ದಲೈಲಾಮಾ

ಸೋಮವಾರ, 19 ಡಿಸೆಂಬರ್ 2022 (15:26 IST)
ನವದೆಹಲಿ : ಭಾರತ ಉತ್ತಮ ಜಾಗವಾಗಿದ್ದು, ಇದು ನನ್ನ ಶಾಶ್ವತ ನಿವಾಸವಾಗಿದೆ. ಇದರಿಂದಾಗಿ ನಾವು ಭಾರತಕ್ಕೆ ಆದ್ಯತೆಯನ್ನು ನೀಡುತ್ತೇವೆ ಎಂದು ಟಿಬೆಟಿಯನ್ ಆಧ್ಯಾತ್ಮಿಕ ಗುರು ದಲೈಲಾಮಾ ಹೇಳಿದರು.

ಹಿಮಾಚಲ ಪ್ರದೇಶದ ಕಾಂಗ್ರಾ ವಿಮಾನ ನಿಲ್ದಾಣದಲ್ಲಿ ಚೀನಾ ಘರ್ಷಣೆಯ ಕುರಿತು ಪ್ರತಿಕ್ರಿಯಿಸಿದ ಅವರು, ಯುರೋಪ್, ಆಫ್ರಿಕಾ ಮತ್ತು ಏಷ್ಯಾ ರಾಷ್ಟ್ರಗಳು ಸುಧಾರಣೆಗೊಳ್ಳುತ್ತಿವೆ.

ಅದೇ ರೀತಿ ಚೀನಾವೂ ಹೊಂದಿಕೊಳ್ಳುತ್ತಿದೆ. ಆದರೆ ಚೀನಾಕ್ಕೆ ಹಿಂತಿರುಗಲು ಯಾವುದೇ ಅರ್ಥವಿಲ್ಲ. ನನಗೆ ಭಾರತವು ಉತ್ತಮ ಸ್ಥಳವಾಗಿದ್ದು, ಇದು ನನ್ನ ಶಾಶ್ವತ ನಿವಾಸವಾಗಿದೆ. ಇದಕ್ಕೆ ನಾನು ಹೆಚ್ಚಿನ ಆದ್ಯತೆ ನೀಡುತ್ತೇನೆ ಎಂದು ತಿಳಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ