ಚೀನಾ ವಸ್ತು ಆಮದಿಗೆ ತಡೆ, ಕಂಪನಿಗಳಿಗೆ ನಿರ್ಬಂಧ: ಕೇಂದ್ರದ ಹೊಸ ಸರ್ಜಿಕಲ್ ಸ್ಟ್ರೈಕ್

ಗುರುವಾರ, 2 ಜುಲೈ 2020 (09:22 IST)
ನವದೆಹಲಿ: ಗಡಿಯಲ್ಲಿ ಭಾರತೀಯ ಸೇನೆ ಮೇಲೆ ಕಾಲ್ಕೆರೆದು ಜಗಳಕ್ಕೆ ಬಂದ ಚೀನಾಗೆ ತಕ್ಕ ಪಾಠ ಕಲಿಸಲು ಕೇಂದ್ರ ಸರ್ಕಾರ ವಿಶಿಷ್ಟ ರೀತಿ ಅನುಸರಿಸುತ್ತಿದೆ.


ಈಗಾಗಲೇ ಹವಾನಿಯಂತ್ರಿತ, ಟಿವಿ, ಇತ್ಯಾದಿ ಇಲೆಕ್ಟ್ರಾನಿಕ್ ವಸ್ತುಗಳ ಬಿಡಿ ಭಾಗಗಳನ್ನು ವಿದೇಶಗಳಿಂದ ಅಮದು ಮಾಡಿಕೊಳ್ಳಲು ಕೇಂದ್ರ ನಿರ್ಬಂಧ ವಿಧಿಸಿದೆ. ಇದಕ್ಕೆ ಈಗ ಕೇಂದ್ರ ಸರ್ಕಾರದ ಪರವಾನಗಿ ಪಡೆಯಬೇಕು ಎಂದು ಹೊಸ ನಿಯಮ ಜಾರಿಗೆ ತಂದಿದೆ. ಇದರಿಂದ ಚೀನಾ ವಸ್ತುಗಳು ಭಾರತಕ್ಕೆ ಬರಲು ಕಷ್ಟವಾಗಲಿದೆ.

ಇದೀಗ ಕೇಂದ್ರ ಸಚಿವ ನಿತಿನ್ ಗಡ್ಕರಿ ಚೀನಾ ಮೂಲದ ಕಂಪನಿಗಳಿಗೆ ಭಾರತದಲ್ಲಿ ರಸ್ತೆ ನಿರ್ಮಾಣದ ಗುತ್ತಿಗೆ ಪಡೆಯಲು ಅವಕಾಶ ನೀಡಲ್ಲ ಎಂದು ಹೇಳಿದ್ದಾರೆ. ಈ ಮೂಲಕ ಚೀನಾ ಮೇಲೆ ಅರ್ಥಿಕ ನಿರ್ಬಂಧಕ್ಕೆ ಮುಂದಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ