West Bengal: ಪಶ್ಚಿಮ ಬಂಗಾಲದಲ್ಲಿ ವಕ್ಫ್ ಗಲಾಟೆಯಲ್ಲಿ ಸುಟ್ಟು ಕರಕಲಾದ ಸೀರೆಅಂಗಡಿ ವಿಡಿಯೋ ನೋಡಿದ್ರೆ ಕರುಳು ಚುರಕ್ ಅನ್ನುತ್ತೆ
ಮುರ್ಷಿದಾಬಾದ್ ಸೇರಿದಂತೆ ಮುಸ್ಲಿಮ್ ಬಾಹುಳ್ಯವಿರುವ ಪ್ರದೇಶಗಳಲ್ಲಿ ವಕ್ಫ್ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿತ್ತು. ಹಲವೆಡೆ ಹಿಂದೂ ಧರ್ಮೀಯರ ಮನೆ, ಅಂಗಡಿಗಳ ಮೇಲೆ ದಾಳಿ ಮಾಡಲಾಗಿತ್ತು. ಹಲವರು ಭಯಗೊಂಡು ಮನೆ ಖಾಲಿ ಮಾಡಿದ್ದಾರೆ.
ಈ ನಡುವೆ ಸೋಷಿಯಲ್ ಮೀಡಿಯಾದಲ್ಲಿ ಸೀರೆ ಅಂಗಡಿಯೊಂದರ ವಿಡಿಯೋ ವೈರಲ್ ಆಗಿದೆ. ಇದರಲ್ಲಿ ಸೀರೆ ಅಂಗಡಿಯನ್ನು ಸಂಪೂರ್ಣವಾಗಿ ಭಸ್ಮ ಮಾಡಲಾಗಿದೆ. ಇರುವ ಸೀರೆಗಳು ಸುಟ್ಟು ಹೋಗಿರುವುದನ್ನು ಕಾಣಬಹುದು. ಇಂತಹ ಹಲವು ಘಟನೆಗಳು ವಕ್ಫ್ ಪ್ರತಿಭಟನೆಯಲ್ಲಿ ನಡೆದಿವೆ. ಹಲವರು ಮನೆ, ಮಠ ಕಳೆದುಕೊಂಡಿದ್ದಾರೆ.