ಚೀನಾವೂ ಬೇಡ ಟರ್ಕಿಯೂ ಬೇಡ: ಎಲ್ಲಾ ಬ್ಯಾನ್ ಅಂತಿದ್ದಾರೆ ಭಾರತೀಯರು

Krishnaveni K

ಸೋಮವಾರ, 12 ಮೇ 2025 (10:12 IST)
Photo Credit: X
ನವದೆಹಲಿ: ಭಾರತ ಪಾಕಿಸ್ತಾನ ಸಂಘರ್ಷದ ಸಮಯದಲ್ಲಿ ಪಾಕಿಸ್ತಾನಕ್ಕೆ ಬೆಂಬಲ ನೀಡಿದ ಚೀನಾವೂ ಬೇಡ, ಟರ್ಕಿಯೂ ಬೇಡ ಎನ್ನುತ್ತಿದ್ದಾರೆ ಈಗ ಭಾರತೀಯರು. ಸೋಷಿಯಲ್ ಮೀಡಿಯಾದಲ್ಲಿ ಈಗ ಇದು ಟ್ರೆಂಡ್ ಆಗಿದೆ.

ಭಾರತದ ಮಾರುಕಟ್ಟೆಗಳಲ್ಲಿ ಚೀನಾ ಮತ್ತು ಟರ್ಕಿ ವಸ್ತುಗಳ ಸಾಕಷ್ಟು ಮಾರಾಟವಾಗುತ್ತದೆ. ಇದೀಗ ಈ ಎರಡೂ ದೇಶಗಳು ಯುದ್ಧದ ಸಂದರ್ಭದಲ್ಲಿ ಪಾಕಿಸ್ತಾನವನ್ನೇ ಬೆಂಬಲಿಸುತ್ತಿರುವುದಕ್ಕೆ ಭಾರತೀಯರು ಸಿಡಿದೆದ್ದಿದ್ದಾರೆ.

ನಮಗೆ ವ್ಯವಹಾರ ನಂತರ ಮೊದಲು ದೇಶ ಎನ್ನುತ್ತಿದ್ದಾರೆ. ನಮ್ಮ ದೇಶಕ್ಕೇ ಕನ್ನ ಹಾಕುವ ರಾಷ್ಟ್ರಕ್ಕೆ ಬೆಂಬಲ ನೀಡುವ ರಾಷ್ಟ್ರಗಳನ್ನು ನಾವೂ ಬೆಂಬಲಿಸಲ್ಲ ಎನ್ನುತ್ತಿದ್ದಾರೆ. ಇದೇ ಕಾರಣಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಈಗ ಚೀನಾ ಬ್ಯಾನ್, ಟರ್ಕಿ ಬ್ಯಾನ್ ಅಭಿಯಾನ ಶುರುವಾಗಿದೆ.

ಚೀನಾ ಮತ್ತು ಟರ್ಕಿಯಿಂದ ಆಮದಾಗುವ ಇಲೆಕ್ಟ್ರಾನಿಕ್ ವಸ್ತುಗಳು, ಒಣಹಣ್ಣು, ಬಟ್ಟೆ ಸೇರಿದಂತೆ ವಿವಿಧ ಬ್ರ್ಯಾಂಡ್ ಗಳನ್ನು ಗುರುತಿಸಿ ಅವುಗಳನ್ನು ಬಾಯ್ಕಾಟ್ ಮಾಡಬೇಕು ಎಂದು ಸೋಷಿಯಲ್ ಮೀಡಿಯಾದಲ್ಲಿ ಭಾರತೀಯರು ಕರೆ ಕೊಡುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ