ಕುಡಿದ ಮತ್ತಿನಲ್ಲಿ ಮಹಿಳೆ ತಲೆ ಮೇಲೆ ಮೂತ್ರವಿಸರ್ಜನೆ

ಗುರುವಾರ, 16 ಮಾರ್ಚ್ 2023 (16:32 IST)
ಕೋಲ್ಕತ್ತಾ : ಕೆಲ ತಿಂಗಳ ಹಿಂದೆ ಏರ್ ಇಂಡಿಯಾ ವಿಮಾನದಲ್ಲಿ ವ್ಯಕ್ತಿಯೊಬ್ಬ ಮಹಿಳೆಯ ಮೇಲೆ ಮೂತ್ರವಿಸರ್ಜನೆ ಮಾಡಿ ಭಾರೀ ವಿವಾದ ಉಂಟಾಗಿತ್ತು. ಇದೀಗ ಭಾರತೀಯ ರೈಲ್ವೆಯಲ್ಲೂ ಸಿಬ್ಬಂದಿ ಮಹಿಳೆಯೊಬ್ಬರ ಮೇಲೆ ಮೂತ್ರ ವಿಸರ್ಜನೆ ಮಾಡಿರುವ ಘಟನೆ ವರದಿಯಾಗಿದೆ.

ಅಮೃತಸರದಿಂದ ಕೋಲ್ಕತ್ತಾ ತೆರಳುತ್ತಿದ್ದ ಅಕಲ್ ತಖ್ತ್ ಎಕ್ಸ್ಪ್ರೆಸ್ ರೈಲಿನಲ್ಲಿ ಭಾನುವಾರ ರಾತ್ರಿ ಈ ಘಟನೆ ನಡೆದಿದೆ. ರೈಲಿನ ಟಿಕೆಟ್ ಪರೀಕ್ಷಕ ಕುಡಿದ ಮತ್ತಿನಲ್ಲಿ ಮಹಿಳೆಯೊಬ್ಬರ ತಲೆ ಮೇಲೆ ಮೂತ್ರವಿಸರ್ಜನೆ ಮಾಡಿದ್ದಾನೆ.

ವರದಿಗಳ ಪ್ರಕಾರ, ಮಹಿಳೆ ತನ್ನ ಪತಿಯೊಂದಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದು, ಮಲಗಿದ್ದ ವೇಳೆ ರೈಲಿನಲ್ಲಿ ನಿಯೋಜನೆಗೊಂಡಿದ್ದ ಟಿಕೆಟ್ ಪರೀಕ್ಷಕ ಮುನ್ನಾ ಕುಮಾರ್ ಮಹಿಳೆ ಮೇಲೆ ಮೂತ್ರವಿಸರ್ಜನೆ ಮಾಡಿದ್ದಾನೆ. ಈ ವೇಳೆ ಮಹಿಳೆ ಕಿರುಚಿಕೊಂಡಿದ್ದು, ಕುಮಾರ್ ಅಲ್ಲಿಂದ ಓಡಿಹೋಗಲು ಪ್ರಯತ್ನಿಸಿದ್ದಾನೆ. ಆದರೆ ಮಹಿಳೆಯ ಪತಿ ಟಿಟಿಇ ಯನ್ನು ಹಿಡಿದು, ಥಳಿಸಿ, ಪೊಲೀಸರಿಗೆ ಒಪ್ಪಿಸಿದ್ದಾರೆ. 

ಮುನ್ನಾ ಕುಮಾರ್ನನ್ನು ಪೊಲೀಸರು ಬಂಧಿಸಿದ್ದು, ಈ ವೇಳೆ ಆತ ಮದ್ಯಪಾನ ಮಾಡಿ ನಶೆಯಲ್ಲಿ ಮೂತ್ರವಿಸರ್ಜನೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ