ಉತ್ತರ ಪ್ರದೇಶದ ಲಷ್ಕರ್ ಇ ತೊಯ್ಬಾ ಅಡಗುದಾಣಗಳ ಮೇಲೆ ದಾಳಿ: ಇಬ್ಬರ ಬಂಧನ

ಸೋಮವಾರ, 10 ಜುಲೈ 2017 (17:23 IST)
ಲಖನೌ:ಜಮ್ಮು-ಕಾಶ್ಮೀರ ಪೊಲೀಸರು ಉತ್ತರಪ್ರದೇಶದಲ್ಲಿದ್ದ ಲಷ್ಕರ್ ಇ ತೊಯ್ಬಾ ಉಗ್ರ ಸಂಘಟನೆಯ ಅಡಗು ತಾಣಗಳ ಮೇಲೆ ದಾಳಿ ನಡೆಸಿದ್ದು, ಇಬ್ಬರು ಶಂಕಿತರನ್ನು ಬಂಧಿಸಿದ್ದಾರೆ. ಬಂಧಿತರು ಮುಜಾಫರ್ ನಗರದ ನಿವಾಸಿಯಾಗಿರುವ ಸಂದೀಪ್ ಕುಮಾರ್ ಅಲಿಯಾಸ್ ಅದಿಲ್, ದಕ್ಷಿಣ ಕಾಶ್ಮೀರದ ಕುಲ್ಗಾಂ ನಿವಾಸಿಯಾಗಿರುವ ಮುನೀಬ್ ಶಾಹ್  ಎಂದು ತಿಳಿದುಬಂದಿದೆ.
 
ಬಂಧಿತ ಶಂಕಿತರಿಬ್ಬರು ದಕ್ಷಿಣ ಕಾಶ್ಮೀರದಲ್ಲಿ ಉಗ್ರ ಚಟುವಟಿಕೆಗಳು ಸೇರಿದಂತೆ ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದರು. ಅಲ್ಲದೆ, ಕಾಶ್ಮೀರ ಕಣಿವೆಯಲ್ಲಿನ ಎಟಿಎಂ ಗಳನ್ನು ಲೂಟಿ ಮಾಡಲು ನಿಷೇಧಿತ ಲಷ್ಕರ್-ಇ-ತೊಯ್ಬಾ ಸಂಘಟನೆಯ ಉಗ್ರರಿಗೆ ಸಹಕರಿಸುತ್ತಿದ್ದರು.
 
ಈ ಹಿಂದೆ ಕಾಶ್ಮೀರದಲ್ಲಿ ನಡೆಸಲಾಗಿದ್ದ ಎನ್ ಕೌಂಟರ್ ನಲ್ಲಿ ಬಷೀರ್ ಲಷ್ಕರಿ ಎಂಬ ಉಗ್ರನನ್ನು ಹತ್ಯೆ ಮಾಡಲಾಗಿತ್ತು. ಕಾಶ್ಮೀರ ಕಣಿವೆಯಲ್ಲಿ ಪೊಲೀಸ್ ಅಧಿಕಾರಿ ಸೇರಿದಂತೆ ನಾಲ್ವರು ಪೊಲೀಸ್ ಸಿಬ್ಬಂದಿಗಳ ಹತ್ಯೆಗೆ ಕಾರಣನಾಗಿದ್ದ ಬಷೀರ್ ಗೆ ಆಶ್ರಯ ನೀಡಲು ಸಂದೀಪ್ ಶರ್ಮಾ ಸಹಕರಿಸಿದ್ದ. 
 

ವೆಬ್ದುನಿಯಾವನ್ನು ಓದಿ