ರೋಹ್ಟಕ್ ಜೈಲಿಗೇ ಹೆಲಿಕಾಪ್ಟರ್`ನಲ್ಲಿ ತೆರಳಿ ರಾಮ್ ರಹೀಂಗೆ ಶಿಕ್ಷೆ ಪ್ರಕಟಿಸಲಿರುವ ನ್ಯಾಯಾಧೀಶರು
ಸಿಬಿಐ ನ್ಯಾಯಾಧೀಶರಿಗೆ ಸಂಪೂರ್ಣ ಭದ್ರತೆ ಒದಗಿಸುವಂತೆ ಹರ್ಯಾಣ ಮತ್ತು ಪಂಜಾಬ್ ಹೈಕೋರ್ಟ್`ನ ಮುಖ್ಯ ನ್ಯಾಯಮೂರ್ತಿ ಸೇರಿ ಎಲ್ಲ ನ್ಯಾಯಾಧೀಶರು ಜೈಲಧಿಕಾರಿಗಳು ಮತ್ತು ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ತಾಕೀತು ಮಾಡಿದ್ದಾರೆ. ಡೇರಾ ಗುರು ದೋಷಿಯೆಂದು ಘೋಷಿಸಿದ ಬಳಿಕ ಏರ್ಪಟ್ಟ ಹಿಂಸಾಚಾರದ ಬಳಿಕ ವಿಡಿಯೋ ಕಾನ್ಫರೆನ್ಸ್ ಮೂಲಕ ಶಿಕ್ಷೆ ಘೋಷಿಸಲು ತೀರ್ಮಾನಿಸಲಾಗಿತ್ತು. ಬಳಿಕ ರೋಹ್ಟಕ್`ನಲ್ಲೇ ಶಿಕ್ಷೆ ಪ್ರಕಟಿಸಲು ತೀರ್ಮಾನಿಸಲಾಗಿದೆ. ನಿನ್ನೆ ಅಪರಾಧಿ ರಾಮ್ ರಹೀಮ್ ಸಿಂಗ್`ನನ್ನ ಸಹ ಖಾಸಗಿ ಹೆಲಿಕಾಪ್ಟರ್`ನಲ್ಲಿ ರೋಹದಟಕ್`ಗೆ ಕರೆದೊಯ್ಯಲಾಗಿತ್ತು.