ಮಂಡಿಯಲ್ಲಿ ಅನೇಕ ಕಲಾಕೃತಿಗಳು ಅಳಿವಿನ ಅಂಚಿನಲ್ಲಿದೆ. ಹಿಮಾಚಲ ಪ್ರದೇಶದಲ್ಲಿ ಕಥ್ ಕುಣಿ ಎಂಬ ಸ್ಥಳೀಯ ನಿರ್ಮಾಣ ಕಲಾಕೃತಿಯಿದೆ. ಕುರಿಗಳ ಚರ್ಮದಿಂದ ಬಟ್ಟೆ,ಜಾಕೆಟ್ ತಯಾರಿಸುತ್ತಾರೆ. ಇದು ಅಪರೂಪದ ಕಲಾಕೃತಿಯಾಗಿದ್ದು, ಇದನ್ನು ಪ್ರಚುರಪಡಿಸಲು ನಾವು ಕೆಲವು ಯೋಜನೆ ಕೈಗೆತ್ತಿಕೊಳ್ಳಬೇಕಾಗಿದೆ. ಮಾಂಡಿ ಕ್ಷೇತ್ರದ ಜಾನಪದ ಕಲೆ ಉಳಿಸಲು ನಾವು ಕೆಲಸ ಮಾಡಬೇಕಿದೆ. ಇಂದು ಮೊದಲ ಬಾರಿಗೆ ಮಂಡಿ ಕ್ಷೇತ್ರದ ಪರವಾಗಿ ಮಾತನಾಡಲು ಅವಕಾಶ ನೀಡಿದ್ದಕ್ಕೆ ಧನ್ಯವಾದಗಳು ಎಂದು ಕಂಗನಾ ಹೇಳಿದ್ದಾರೆ.