ಕರುಣಾನಿಧಿ ಅಂತ್ಯಕ್ರೀಯೆ ಜಾಗ ವಿವಾದ; ವಿಚಾರಣೆ ನಡೆಸಿಕೊಡಲಿರುವುದು ಯಾರು ಗೊತ್ತಾ…?
ಬುಧವಾರ, 8 ಆಗಸ್ಟ್ 2018 (06:21 IST)
ಚೆನ್ನೈ: ಮಂಗಳವಾರ ಮೃತಪಟ್ಟ ಡಿಎಂಕೆ ನಾಯಕ ಎಂ. ಕರುಣಾನಿಧಿ ಅಂತ್ಯಕ್ರಿಯೆ ಜಾಗ ವಿವಾದಕ್ಕೆ ಸಂಬಂಧಿಸಿದಂತೆ ತಮಿಳುನಾಡು ಸರ್ಕಾರ ಸಮಯಾವಕಾಶ ಕೇಳಿದ ಹಿನ್ನೆಲೆ ವಿಚಾರಣೆಯನ್ನು ಬೆಳಿಗ್ಗೆ 8ಗಂಟೆಗೆ ಹೈಕೋರ್ಟ್ ಮುಂದೂಡಿದೆ.
ಈ ಕುರಿತು ಸರ್ಕಾರ ಬೆಳಿಗ್ಗೆ ಮದ್ರಾಸ್ ಹೈಕೋರ್ಟ್ ದ್ವಿಸದಸ್ಯ ಪೀಠಕ್ಕೆ ಉತ್ತರ ನೀಡಲಿದೆ.
ಇನ್ನು ಈ ವಿವಾದಕ್ಕೆ ಸಂಬಂಧಿಸಿ ಮದ್ರಾಸ್ ಹೈಕೋರ್ಟ್‌ನಲ್ಲಿ ನಡೆಯಲಿರುವ ವಿಚಾರಣೆಯನ್ನು ನಡೆಸಿಕೊಡಲಿರುವುದು ಕರ್ನಾಟಕ ಮೂಲದ ನ್ಯಾಯಮೂರ್ತಿಗಳು ಎನ್ನುವುದು ವಿಶೇಷ.
ಮದ್ರಾಸ್ ಹೈಕೋರ್ಟ್ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಹುಲುವಾಡಿ ಜಿ. ರಮೇಶ್ ಅವರು ಡಿಎಂಕೆ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಲಿದ್ದಾರೆ
ಮರೀನಾ ಬೀಚ್ ಬಳಿಯ ಅಣ್ಣಾ ಮೆಮೋರಿಯಲ್‌ನಲ್ಲಿ ಕರುಣಾನಿಧಿ ಅಂತ್ಯಸಂಸ್ಕಾರ ನಡೆಸಲು ಪುತ್ರ ಸ್ಟಾಲಿನ್ ತಮಿಳುನಾಡು ಸರಕಾರಕ್ಕೆ ಮನವಿ ಸಲ್ಲಿಸಿದ್ದು, ಇದಕ್ಕೆ ಸರಕಾರ ಒಪ್ಪಿಗೆ ಸೂಚಿಸಿಲ್ಲ. ಹೀಗಾಗಿ ಡಿಎಂಕೆ ಅಂತ್ಯಸಂಸ್ಕಾರಕ್ಕೆ ಸ್ಥಳಾವಕಾಶ ಕೋರಿ ಮನವಿ ಸಲ್ಲಿಸಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ