ಬ್ರಿಟನ್ ಸಂಸತ್ನಲ್ಲಿ ಕಾಶ್ಮೀರದ ಚರ್ಚೆ: ಭಾರತ ಖಂಡನೆ

ಶನಿವಾರ, 25 ಸೆಪ್ಟಂಬರ್ 2021 (09:36 IST)
ನವದೆಹಲಿ : ಬ್ರಿಟನ್ ಸಂಸತ್ತಿನ ಸರ್ವಪಕ್ಷೀಯ ಸಂಸದರ ಸಮೂಹ(ಎಪಿಪಿಜಿ)ದ ಸದಸ್ಯರು ಕಾಶ್ಮೀರ ವಿಚಾರವಾಗಿ ಅಲ್ಲಿನ ಸಂಸತ್ನಲ್ಲಿ ಚರ್ಚೆ ನಡೆಸಿರುವ ವಿಚಾರ ಬೆಳಕಿಗೆ ಬಂದಿದ್ದು, ಈ ನಡೆಯನ್ನು ಭಾರತ ತೀವ್ರವಾಗಿ ಖಂಡಿಸಿದೆ. “ಕಾಶ್ಮೀರದಲ್ಲಿ ಮಾನವ ಹಕ್ಕು’ ಎನ್ನುವ ನಿರ್ಣಯವೊಂದರ ಕುರಿತು ಬ್ರಿಟನ್ ಸಂಸತ್ನಲ್ಲಿ ಚರ್ಚೆ ನಡೆದಿತ್ತು.
Photo Courtesy: Google

ಅಲ್ಲದೇ, ಬ್ರಿಟನ್ನಲ್ಲಿನ ಪಾಕ್ ಮೂಲದ ಸಂಸದ ನಾಝ್ ಶಾ ಸೇರಿದಂತೆ ಹಲವರು ಕಾಶ್ಮೀರದ ವಿಚಾರದಲ್ಲಿ ಮೂಗುತೂರಿಸಿದ್ದಲ್ಲದೇ, ಪ್ರಧಾನಿ ನರೇಂದ್ರ ಮೋದಿ ಅವರ ಕುರಿತೂ ಆಕ್ಷೇಪಾರ್ಹವಾಗಿ ಮಾತನಾಡಿದ್ದರು.
ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಲಂಡನ್ನಲ್ಲಿರುವ ಭಾರತೀಯ ಹೈಕಮಿಷನ್ನ ಸಚಿವರು, “ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ದೇಶವೊಂದರ ಚುನಾಯಿತ ನಾಯಕರೊಬ್ಬರ ಕುರಿತು ಅವಹೇಳನಕಾರಿಯಾಗಿ ಮಾತನಾಡಲು ಮತ್ತೂಂದು ಪ್ರಜಾಸತ್ತಾತ್ಮಕ ರಾಷ್ಟ್ರದ ಸಂಸತ್ ಅನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಅಲ್ಲದೇ, ಭಾರತದ ಅವಿಭಾಜ್ಯ ಅಂಗವಾದ ಕಾಶ್ಮೀರದ ಕುರಿತು ಯಾವುದೇ ಆಧಾರವಿಲ್ಲದೇ ಮಾತನಾಡಿರುವುದನ್ನು ನಾವು ಖಂಡಿಸುತ್ತೇವೆ’ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ